ಏನಿದು ಚಿತ್ರದುರ್ಗದಲ್ಲಿ ಇಂದು ಶೂನ್ಯ ನೆರಳಿನ ದಿನ..! - BC Suddi
ಏನಿದು ಚಿತ್ರದುರ್ಗದಲ್ಲಿ ಇಂದು ಶೂನ್ಯ ನೆರಳಿನ ದಿನ..!

ಏನಿದು ಚಿತ್ರದುರ್ಗದಲ್ಲಿ ಇಂದು ಶೂನ್ಯ ನೆರಳಿನ ದಿನ..!

 

ಶೂನ್ಯ ಸಂಪಾದನೆ, ಶೂನ್ಯವೇಳೆ, ಶೂನ್ಯ ಪೀಠಾಧಿಪಥಿ ಈ ಹೆಸರುಗಳನ್ನು ನಾವುಕೇಳಿದ್ದೇವೆ. ಆದರೆ ಶೂನ್ಯ ನೆರಳಿನ ದಿನದ ಬಗ್ಗೆ ಮಾತ್ರ ನಮಗೆ ಹೆಚ್ಚಿನ ಮಾಹಿತಿ ಇರಲಾರದು. ವಿದ್ಯಾರ್ಥಿಗಳು ಯಾವುದಾದರೂ ಒಂದು ವಿಷಯದಲ್ಲಿ ಸೊನ್ನೆ ಅಂಕ ಗಳಿಸಿದರೆ ಅವನನ್ನು ಶತ ದಡ್ಡನೆಂದೂ, ಮೂದಲಿಸುತ್ತೇವೆ. ಸದ್ಯ ನಾನು ಇಲ್ಲಿ ತಿಳಿಸಲು ಹೊರಟಿರುವುದು ಶೂನ್ಯ ನೆರಳಿನ ದಿನದ ಬಗ್ಗೆ.

ಈಗಾಗಲೇ ಶೂನ್ಯ ನೆರಳಿನ ದಿನಾಚರಣೆಯ ಕಾರ್ಯಕ್ರಮಗಳು ದೇಶಾದ್ಯಂತ ನಡೆದು, ಇದೀಗ ಕರ್ನಾಟಕದ ನಾನಾ ಭಾಗಗಳಲ್ಲಿ ಶೂನ್ಯನೆರಳಿನ ದಿನದ ವೀಕ್ಷಣೆಯನ್ನು ಮಾಡಲು ಹೊರಟಿರುವ ಸಮಯದಲ್ಲಿ ನಮ್ಮ ಚಿತ್ರದುರ್ಗದಲ್ಲಿಯೂ ಇಂದು ಅಂದರೆ 27-04-2021 ರ ಮಧ್ಯಾಹ್ನ 12.15 ರಿಂದ 12.35 ರ ಅವಧಿಯಲ್ಲಿ ಒಂದು ನಿಮಿಷ ಕಾಲ ನೆರಳು ಕಣ್ಮರೆಯಾಗುವುದನ್ನು ನಾವೆಲ್ಲರೂ ನೋಡಬಹುದಾಗಿದೆ.

ನೀವೂ ಒಂದು ಸರಳ ಪ್ರಯೋಗ ಮಾಡುವುದರ ಮೂಲಕ ಈ ಶೂನ್ಯ ನೆರಳಿನ ದಿನದ ಅನುಭವವನ್ನು ಪಡೆಯಬಹುದಾಗಿದೆ. ಮದ್ಯಾಹ್ನ 12 ಗಂಟೆಯ ಹೊತ್ತಿಗೆ ಬಿಸಿಲಿರುವ ಸಮಯದಲ್ಲಿ ನಿಮ್ಮ ಮನೆ ಟೆರೇಸಿನ ಮೇಲೆ ಅಥವಾ ಮನೆಯ ಮುಂದಿನ ನೆಲದ ಮೇಲೆ ಪಿವಿಸಿ ಕೊಳವೆ, ಉದ್ದನೆಯ ಕೋಲು ಅಥವಾ ಧ್ವಜ ಸ್ಥಂಭ ನಿಲ್ಲಿಸಿ, ವೀಕ್ಷಣೆ ಆರಂಭಿಸಿ. 12.15 ರಿಂದ 12.35 ರ ಸಮಯದಲ್ಲಿ ಯಾವುದೋ ಒಂದು ನಿಮಿಷದಲ್ಲಿ ನೆರಳು ಕಾಣಿಸುವುದಿಲ್ಲ. ಅಂದರೆ ಲಂಬಾಕಾರದ ವಸ್ತುಗಳ ಕೆಳಗೆ ನೆರಳು ಇರುತ್ತದೆ.

ನಮ್ಮ ನೆರಳು ನಮ್ಮ ಪಾದದ ತಳಭಾಗದಲ್ಲಿರುತ್ತದೆ. ಅದು ನಮಗೆ ಗೋಚರಿಸುವುದಿಲ್ಲ. ಕಾರಣ ಸೂರ್ಯ ನಡುನೆತ್ತಿಯ ಮೇಲಿರುತ್ತದೆ. ಆ ಸಮಯದಲ್ಲಿ ವಸ್ತುಗಳನ್ನು ಬಿಸಿಲಿನಲ್ಲಿ ಇಟ್ಟು ನೋಡಿ, ನೆರಳು ಕಾಣುವುದಿಲ್ಲ. ನೆರಳು ತಳಭಾಗದಲ್ಲಿರುತ್ತದೆ. ತಪ್ಪದೇ ಇಂದೇ ಈ ಪ್ರಯೋಗ ಮಾಡಿ. ಶೂನ್ಯ ನೆರಳಿನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ.

ಲೇಖಕರು-ಎಚ್.ಎಸ್.ಟಿ.ಸ್ವಾಮಿ ಚಿತ್ರದುರ್ಗ