ಯುವರತ್ನ ಚಿತ್ರ ತಂಡ ಮನವಿಗೆ ಸ್ಪಂದಿಸಿದ ಸಿಎಂ - BC Suddi
ಯುವರತ್ನ ಚಿತ್ರ ತಂಡ ಮನವಿಗೆ ಸ್ಪಂದಿಸಿದ ಸಿಎಂ

ಯುವರತ್ನ ಚಿತ್ರ ತಂಡ ಮನವಿಗೆ ಸ್ಪಂದಿಸಿದ ಸಿಎಂ

ಬೆಂಗಳೂರು: ನಟ ಪುನೀತ್ ರಾಜಕುಮಾರ್, ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಶೇಕಡ 50 ರಷ್ಟು ಮಿತಿ ನಿರ್ಧಾರ ಬದಲಿಸಿ ಎಂದು ಮನವಿ ಮಾಡಿದ್ದಾರೆ.ಚಿತ್ರರಂಗದ ಮನವಿಗೆ ಸ್ಪಂದಿಸಿದ ಹೌಸ್ ಫುಲ್ ಪ್ರದರ್ಶನಕ್ಕೆ ಸಿಎಂ ಅವಕಾಶ ನೀಡಿದ್ದಾರೆ.

ಹಾಗಾಗಿ ಚಿತ್ರರಂಗದ ಮನವಿ ಮೇರೆಗೆ ರಾಜ್ಯದಲ್ಲಿ ಏಪ್ರಿಲ್ 7 ರವರೆಗೆ ಸಿನಿಮಾ ಥಿಯೇಟರ್ ಗಳಲ್ಲಿ ಶೇಕಡ 100 ರಷ್ಟು ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ.

ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಲ್ಲಿ ಸಿನಿಮಾ ಥಿಯೇಟರ್ ಗಳಲ್ಲಿ ಶೇಕಡ 50 ರಷ್ಟು ಸೀಟು ಭರ್ತಿಗೆ ಮಾತ್ರ ಆದೇಶ ಹೊರಡಿಸಲಾಗಿತ್ತು. ‘ಯುವರತ್ನ’ ಚಿತ್ರತಂಡ, ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರರಂಗದಿಂದ ಮನವಿ ಮಾಡಲಾಗಿತ್ತು. ಹಿನ್ನೆಲೆಯಲ್ಲಿ ಶೇಕಡ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ.!

error: Content is protected !!