ಹೌದು, ನರೇಶ್ ನನ್ನ ಪರಿಚಯದವನು: ಡಿಕೆ ಶಿವಕುಮಾರ್ - BC Suddi
ಹೌದು, ನರೇಶ್ ನನ್ನ ಪರಿಚಯದವನು: ಡಿಕೆ ಶಿವಕುಮಾರ್

ಹೌದು, ನರೇಶ್ ನನ್ನ ಪರಿಚಯದವನು: ಡಿಕೆ ಶಿವಕುಮಾರ್

ಬೆಂಗಳೂರು: ಸಿ.ಡಿ ಬಿಡುಗಡೆ ಮಾಡಿದ ನಂತರ ಯುವತಿ ನನ್ನನ್ನು ಭೇಟಿಯಾಗಲು ಪ್ರಯತ್ನ ಪಟ್ಟಿರಬಹುದು. ಆದ್ರೆ ಇದುವರೆಗೆ ಬೇಟಿಯಾಗಿಲ್ಲ. ಪ್ರಕರಣದಲ್ಲಿ ಕೇಳಿ ಬಂದ ನರೇಶ್ ಎಂಬಾತ ನನಗೆ ಗೊತ್ತು. ಆತ ನನ್ನನ್ನು ಭೇಟಿ ಮಾಡಿದ್ದು ನಿಜ. ಅವನು ನಮ್ಮೊಂದಿಗೆ ಕೆಲವು ವಿಚಾರಗಳನ್ನು ತಿಳಿಸಿದ್ದಾನೆ. ನರೇಶ್ ನನಗೆ ಬೇಕಾದವನು, ಮಾಧ್ಯಮದ ಹುಡುಗ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಬ್ಬ ರಾಜಕಾರಣಿಯಾಗಿ ನೊಂದವರಿಗೆ, ಕಷ್ಟದಲ್ಲಿರುವವರಿಗೆ ಜನಸೇವೆ ಮಾಡುವುದು ನಮ್ಮ ಪ್ರವೃತ್ತಿ. ನಾವು ಸಾರ್ವಜನಿಕ ಜೀವನದಲ್ಲಿ ಇದ್ದೇವೆ. ಹಾಗೆಯೇ ಆ ಹೆಣ್ಣು ಮಗಳು ನನ್ನನ್ನು ಭೇಟಿ ಮಾಡುವ ಪ್ರಯತ್ನ ಮಾಡಿದ್ದಾಳೆ. ಸಮಸ್ಯೆಯಲ್ಲಿ ಸಿಲುಕಿದವರು ಪ್ರಾಮಾಣಿಕರಾಗಿದ್ದರೆ ಸಹಾಯ ಮಾಡಿಯೇ ಮಾಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಯುವತಿ ಪೋಷಕರ ರಕ್ಷಣೆಗಾಗಿ ಸರ್ಕಾರದಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ ಅವರು ಯುವತಿ ಪೋಷಕರಿಗೆ ರಕ್ಷಣೆ ನೀಡುತ್ತಾರೆ. ಸದ್ಯ ಯುವತಿ ಪೋಷಕರು ಬೇರೆಯವರ ರಕ್ಷಣೆಯಲ್ಲಿದ್ದಾರೆ ಎಂಬ ವಿಷಯ ನನಗೆ ತಿಳಿದಿಲ್ಲ. ಅದರ ಬಗ್ಗೆ ಎಲ್ಲ ನಾನು ಏಕೆ ಟ್ರ್ಯಾಕ್ ಮಾಡಲಿ, ನನ್ನ ಬಳಿ ಯಾರಾದರೂ ಬಂದರೆ ಖಂಡಿತ ರಕ್ಷಣೆ ಮಾಡುತ್ತೇನೆ ಎಂದರು.

error: Content is protected !!