ನೂರಾರು ವರ್ಷಗಳ ಇತಿಹಾಸವಿರುವ ತಮಿಳುನಾಡಿನ ಒಂದು ಸಂಸ್ಕೃತಿಯ ಬಗ್ಗೆ ಹೀಗೆಲ್ಲಾ ಮಾತನಾಡುವುದಕ್ಕೆ ಹೇಗೆ ಸಾಧ್ಯ..?: ಪ್ರಧಾನಿ ನರೇಂದ್ರ ಮೋದಿ - BC Suddi
ನೂರಾರು ವರ್ಷಗಳ ಇತಿಹಾಸವಿರುವ ತಮಿಳುನಾಡಿನ ಒಂದು ಸಂಸ್ಕೃತಿಯ ಬಗ್ಗೆ ಹೀಗೆಲ್ಲಾ ಮಾತನಾಡುವುದಕ್ಕೆ ಹೇಗೆ ಸಾಧ್ಯ..?: ಪ್ರಧಾನಿ ನರೇಂದ್ರ ಮೋದಿ

ನೂರಾರು ವರ್ಷಗಳ ಇತಿಹಾಸವಿರುವ ತಮಿಳುನಾಡಿನ ಒಂದು ಸಂಸ್ಕೃತಿಯ ಬಗ್ಗೆ ಹೀಗೆಲ್ಲಾ ಮಾತನಾಡುವುದಕ್ಕೆ ಹೇಗೆ ಸಾಧ್ಯ..?: ಪ್ರಧಾನಿ ನರೇಂದ್ರ ಮೋದಿ

ಮದುರೈ : ತಮಿಳು ನಾಡಿನ ವಿಧಾನ ಸಭಾ ಚುನಾವಣೆಗೆ  ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಎಐಎಡಿಎಮ್ ಕೆ ಮೈತ್ರಿ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದಾರೆ. ಜಲ್ಲಿಕಟ್ಟು ಹಾಗೂ ತಮಿಳು ಭಾಷೆಯ ಬಗ್ಗೆ ಗುಣಗಾನ ಮಾಡಿದ್ದಾರೆ. ಜಲ್ಲಿಕಟ್ಟು ತಮಿಳು ನಾಡಿದ ಅತ್ಯಂತ ಪ್ರಸಿದ್ಧ ಸಂಸ್ಕೃತಿಯಾಗಿದೆ ಎಂದಿದ್ದಾರೆ. 

ಮದುರೈ ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ತಮಿಳು ಭಾಷೆ ಪ್ರಪಂಚದ ಅತ್ಯಂತ ಹಳೆಯ ಭಾಷೆ. ಪ್ರಾದೇಶಿಕ ಸಾಹಿತ್ಯದೊಂದಿಗೆ ಮುದುರೈ ನೊಂದಿಗೆ ಸಂಪರ್ಕ ಹೊಂದಿದೆ ಎಂದಿದ್ದಾರೆ. ಜಲ್ಲಿಕಟ್ಟುವಿನ ಬಗ್ಗೆ ಮಾತಿಗಿಳಿದ ಮೋದಿ, ರಾಜ್ಯದಲ್ಲಿ ಡಿ ಎಮ್ ಕೆ ಸರ್ಕಾರ ಹಾಗೂ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಜಲ್ಲಿಕಟ್ಟನ್ನು ರದ್ದುಗೊಳಿಸಿತ್ತು. ಯುಪಿಎ ಸರ್ಕಾರದ ಮಂತ್ರಿಯೊಬ್ಬರು ಇದನ್ನು ಅನಾಗರಿಕ ಅಭ್ಯಾಸವೆಂದರು. ಇದು ಸರಿಯೇ..? ನೂರಾರು ವರ್ಷಗಳ ಇತಿಹಾಸವಿರುವ ತಮಿಳುನಾಡಿನ ಒಂದು ಸಂಸ್ಕೃತಿಯ ಬಗ್ಗೆ ಹೀಗೆಲ್ಲಾ ಮಾತನಾಡುವುದಕ್ಕೆ ಹೇಗೆ ಸಾಧ್ಯ..? ಎಂದು ಅವರು ಪ್ರಶ್ನಿಸಿದ್ದಾರೆ.

ನಾವು 2014 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ, ಇಲ್ಲಿ ಎಐಎಡಿಎಮ್ ಕೆ ಸರ್ಕಾರವಿದ್ದಾಗ ನಿಷೇಧಿಸಲ್ಪಟ್ಟ ಜಲ್ಲಿಕಟ್ಟನ್ನು ಮತ್ತೆ ಆಚರಣೆಗೆ ತಂದಿದ್ದು ಯಾಕೆ..? ಯಾಕೆಂದರೇ ನಮ್ಮ ತಮಿಳು ಸಂಸ್ಕೃತಿಗಾಗಿ. ತಮಿಳು ಸಂಸ್ಕೃತಿಯಲ್ಲಿ ಅದಕ್ಕೆ ಪ್ರಾಮುಖ್ಯತೆ ಇರುವ ಕಾರಣದಿಂದ ಮತ್ತೆ ನಾವು ಆಚರಣೆಗೆ ಅವಕಾಶ ಒದಗಿಸಿದೆವು. ಇನ್ನು, ಜನವರಿಯಲ್ಲಿ ರಾಹುಲ್ ಗಾಂಧಿ ಮಧುರೈನಲ್ಲಿ ನಡೆದ ಜಲ್ಲಿಕಟ್ಟು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.

“ತಮಿಳು ಸಂಸ್ಕೃತಿ, ಇತಿಹಾಸ ಕಾರ್ಯರೂಪಕ್ಕೆ ಬಂದದ್ದನ್ನು ನೋಡುವುದು ಸಾಕಷ್ಟು ಸುಂದರ ಅನುಭವ ಎಂದು ಅವರು ಹೇಳುವುದರ ಮೂಲಕ ರಾಹುಲ್ ಗೆ ಮೋದಿ ಪರೋಕ್ಷವಾಗಿ ಕುಟುಕಿದ್ದಾರೆ. ಡಿಎಮ್ ಕೆ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಮೋದಿ, ಡಿಎಮ್ ಕೆ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಮಾತನಾಡಲು ವಿಷಯಗಳಿಲ್ಲ. ಹಾಗಾಗಿ ಅವರು ಸುಳ್ಳು ಹೇಳುವುದನ್ನು ಮುಂದುವರಿಸಲೇಬೇಕು. ಅವರು ನಿತ್ಯ ಸುಳ್ಳು ಹೇಳುವುದರಲ್ಲೇ ಕಾಲ ಕಳೆಯುತ್ತಾರೆ ಎಂದು ಹೇಳಿದ್ದಾರೆ.

ಸಿ.ಡಿ ಪ್ರಕರಣದ ಯುವತಿಯ ಪರವಾಗಿ ಕೋರ್ಟ್​ನಲ್ಲಿ ವಾದಿಸುತ್ತಿರುವುದು ವಕೀಲ ಕೆ.ಎನ್.ಜಗದೀಶ್ ಅಲ್ಲ: ಎಸ್​ಐಟಿ ಆರೋಪ

error: Content is protected !!