ಕೆಲಸವೇ ನನ್ನ ಬಾಯ್​ಫ್ರೆಂಡ್​, ಅದನ್ನು ಬಿಟ್ಟರೆ ಬೇರೆ ಯಾವುದಕ್ಕೂ ಸಮಯ ಇಲ್ಲ : ರಶ್ಮಿಕಾ - BC Suddi
ಕೆಲಸವೇ ನನ್ನ ಬಾಯ್​ಫ್ರೆಂಡ್​, ಅದನ್ನು ಬಿಟ್ಟರೆ ಬೇರೆ ಯಾವುದಕ್ಕೂ ಸಮಯ ಇಲ್ಲ : ರಶ್ಮಿಕಾ

ಕೆಲಸವೇ ನನ್ನ ಬಾಯ್​ಫ್ರೆಂಡ್​, ಅದನ್ನು ಬಿಟ್ಟರೆ ಬೇರೆ ಯಾವುದಕ್ಕೂ ಸಮಯ ಇಲ್ಲ : ರಶ್ಮಿಕಾ

ಹೈದರಾಬಾದ್: ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು, ಅವರೆಲ್ಲರ ಜೊತೆಗೂ ಸೋಶಿಯಲ್​ ಮೀಡಿಯಾ ಮೂಲಕ ಸಂಪರ್ಕದಲ್ಲಿ ಇದ್ದಾರೆ. ಅಭಿಮಾನಿಗಳ ಜೊತೆ ಮಾತನಾಡಲು ಅವರು ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದಿದ್ದು, ಒಂದೂವರೆ ಲಕ್ಷಕ್ಕೂ ಅಧಿಕ ಜನರು ಈ ಲೈವ್​ ವೀಕ್ಷಿಸಿದ್ದಾರೆ. ಈ ವೇಳೆ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ರಶ್ಮಿಕಾ ಉತ್ತರಿಸಿದ್ದಾರೆ.

ಅಭಿಮಾನಿಯೊಬ್ಬ ನಿಮ್ಮ ಭಾಯ್​ಫ್ರೆಂಡ್​ ಯಾರು ಎಂಬ ಪ್ರಶ್ನೆ ಕೇಳಿದ್ದು, ಅದಕ್ಕೆ ರಶ್ಮಿಕಾ ‘ಕೆಲಸವೇ ನನ್ನ ಬಾಯ್​ಫ್ರೆಂಡ್​. ಅದನ್ನು ಬಿಟ್ಟರೆ ನನಗೆ ಬೇರೆ ಯಾವುದಕ್ಕೂ ಸಮಯ ಇಲ್ಲ’ ಎಂದು ಹೇಳಿದ್ದು, ತಾವು ಸಿಂಗಲ್​ ಎಂಬುದನ್ನು ರಶ್ಮಿಕಾ ಸ್ಪಷ್ಟಪಡಿಸಿದರು.

ವಿಜಯ್​ ದೇವರಕೊಂಡ ಜೊತೆ ಮತ್ತೆ ಯಾವಾಗ ಸಿನಿಮಾ ಮಾಡುತ್ತೀರಿ ಎಂಬ ಪ್ರಶ್ನೆಗೆ, “ನೀವು ಈ ಮಾತನ್ನು ಅವರಿಗೇ ಕೇಳಬೇಕು ಅಥವಾ ನಿರ್ದೇಶಕರಿಗೆ ಕೇಳಬೇಕು” ಎಂದು ಉತ್ತರಿಸಿದ್ದಾರೆ.

ಇನ್ನು ಇನ್​ಸ್ಟಾಗ್ರಾಮ್​ ಲೈವ್​ ವೇಳೆ ಅವರು ಧರಿಸಿದ ಒಂದು ಉಂಗುರ ಎಲ್ಲರ ಗಮನ ಸೆಳೆದಿದ್ದು, ಅದರ ಬಗ್ಗೆಯೂ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅದು ರಶ್ಮಿಕಾ ಪಾಲಿನ ಸ್ಪೆಷಲ್​ ಉಂಗುರವಂತೆ! ‘ಈ ರಿಂಗ್​ ಕೊಟ್ಟಿದ್ದಕ್ಕೆ ಧನ್ಯವಾದಗಳು. ಎಲ್ಲ ಅಭಿಮಾನಿಗಳ ಪರವಾಗಿ ನಾನು ಇದನ್ನು ಸ್ವೀಕರಿಸಿದ್ದು ಇದು ಯಾವಾಗಲೂ ನನ್ನ ಜೊತೆಗೆ ಇರುತ್ತದೆ. ನೀವೆಲ್ಲ ನನಗೆ ತುಂಬ ಸ್ಪೆಷಲ್​. ಇದು ನನ್ನ ಜನರು ಇದನ್ನು ನನಗೆ ಕೊಟ್ಟಿದ್ದು” ಎಂದು ಅಭಿಮಾನಿಗಳ ಬಗ್ಗೆ ಕುರಿತು ಮಾತನಾಡಿದ್ದಾರೆ.

ಬಾಂಬೆ, ಬೆಂಗಳೂರಿಂದ ಬಂದವರನ್ನು ಕ್ವಾರಂಟೈನ್ ಮಾಡುವಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು : ಸಂಸದೆ ಶೋಭಾ