ಪೂರ್ವ ಲಡಾಖ್‌ನಿಂದ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯು ಸಕಾರಾತ್ಮಕವಾಗಿ ನಡೆಯುತ್ತಿದ್ದು, ಈ ವಿಷಯದ ಬಗ್ಗೆ ಭಾರತೀಯರು ಸಂತೋಷ ಪಡಬೇಕು: ಚೀನಾ - BC Suddi
ಪೂರ್ವ ಲಡಾಖ್‌ನಿಂದ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯು ಸಕಾರಾತ್ಮಕವಾಗಿ ನಡೆಯುತ್ತಿದ್ದು, ಈ ವಿಷಯದ ಬಗ್ಗೆ ಭಾರತೀಯರು ಸಂತೋಷ ಪಡಬೇಕು: ಚೀನಾ

ಪೂರ್ವ ಲಡಾಖ್‌ನಿಂದ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯು ಸಕಾರಾತ್ಮಕವಾಗಿ ನಡೆಯುತ್ತಿದ್ದು, ಈ ವಿಷಯದ ಬಗ್ಗೆ ಭಾರತೀಯರು ಸಂತೋಷ ಪಡಬೇಕು: ಚೀನಾ

ಬೀಜಿಂಗ್: ಪೂರ್ವ ಲಡಾಖ್‌ನಿಂದ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯು ಸಕಾರಾತ್ಮಕವಾಗಿ ನಡೆಯುತ್ತಿದ್ದು, ಈ ವಿಷಯದ ಬಗ್ಗೆ ಭಾರತೀಯರು ಸಂತೋಷ ಪಡಬೇಕು” ಎಂದು ಚೀನಾ ಸೇನೆಯು ಹೇಳಿದೆ. ಎರಡು ದೇಶಗಳ ಸೇನೆಯನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಯನ್ನು ಮುಂದುವರಿಸುವ ಸಂಬಂಧ ಭಾರತ ಮತ್ತು ಚೀನಾ ಸೇನೆಗಳ ಕಮಾಂಡರ್‌ಗಳ ಮಟ್ಟದ 11ನೇ ಸುತ್ತಿನ ಮಾತುಕತೆಯು ನಡೆಯಿತು.

ಸೇನೆಯನ್ನು ಡೆಪ್‌ಸ್ಯಾಂಗ್‌, ಗೋಗ್ರಾ ಮತ್ತು ಹಾಟ್‌ಸ್ಟ್ರಿಂಗ್ಸ್‌ ಪ್ರದೇಶದಿಂದ ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಯಾವುದೇ ರೀತಿಯ ಘಟನೆಗಳು ನಡೆಯದಂತೆ ಸ್ಥಿರತೆಯನ್ನು ಕಾಪಾಡಲು ಉಭಯ ದೇಶಗಳು ಒಪ್ಪಿಕೊಂಡಿದ್ದು, ಬಾಕಿ ಇರುವ ವಿವಾದಾತ್ಮಕ ವಿಷಯಗಳನ್ನು ಶೀಘ್ರ ಇತ್ಯರ್ಥಪಡಿಸಿಕೊಳ್ಳಲು ಎರಡೂ ದೇಶಗಳ ಸೇನೆಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಚೀನಾದ ನಿಯೋಗದ ಅಧಿಕಾರಿಗಳು ‘ಪೂರ್ವನಿರ್ಧರಿತ ಮನಸ್ಥಿತಿ’ ಯೊಂದಿಗೆ ಮಾತುಕತೆಗೆ ಬಂದಿದ್ದು, ತಮ್ಮ ನಿಲುವುಗಳಲ್ಲಿ ಅವರು ಸಡಿಲಿಕೆ ತೋರಲಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.

ದೇಶದ ಎಲ್ಲಾ ನಾಗರೀಕರಿಗೂ ಸುರಕ್ಷಿತ ಜೀವನದ ಹಕ್ಕು ಇರುವುದರಿಂದ ಲಸಿಕೆಯೂ ಅತ್ಯಾವಶ್ಯಕ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ