ಕೊರೊನಾ ನಿಯಂತ್ರಣಕ್ಕೆ ದೆಹಲಿಯಲ್ಲಿ 'ವಿಕೇಂಡ್ ಕರ್ಪ್ಯೂ' - ಅರವಿಂದ ಕೇಜ್ರಿವಾಲ್​ ಆದೇಶ - BC Suddi
ಕೊರೊನಾ ನಿಯಂತ್ರಣಕ್ಕೆ ದೆಹಲಿಯಲ್ಲಿ ‘ವಿಕೇಂಡ್ ಕರ್ಪ್ಯೂ’ – ಅರವಿಂದ ಕೇಜ್ರಿವಾಲ್​ ಆದೇಶ

ಕೊರೊನಾ ನಿಯಂತ್ರಣಕ್ಕೆ ದೆಹಲಿಯಲ್ಲಿ ‘ವಿಕೇಂಡ್ ಕರ್ಪ್ಯೂ’ – ಅರವಿಂದ ಕೇಜ್ರಿವಾಲ್​ ಆದೇಶ

ನವದೆಹಲಿ: ದೇಶದಲ್ಲಿ ದಿನಕ್ಕೆ 1.80 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ದೃಢಪಡುತ್ತಿದ್ದು, ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಇನ್ನು ಕೊವಿಡ್​ ಎರಡನೇ ಅಲೆಯ ಹೊಡೆತ ತಪ್ಪಿಸಿಕೊಳ್ಳಲು ಹಲವು ರಾಜ್ಯಗಳು ತಮ್ಮದೇ ಆದ ಕಠಿಣ ನಿಯಮಗಳ ಮೊರೆ ಹೋಗುತ್ತಿವೆ.

ಮಹಾರಾಷ್ಟ್ರದಲ್ಲಿ ಅಂಶಿಕ ಲಾಕ್ ಡೌನ್ ಬೆನ್ನಲ್ಲೇ ಇದೀಗ ರಾಜಧಾನಿ ದೆಹಲಿಯಲ್ಲೂ ಕೊರೊನಾ ತಡೆಗೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿ ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿದ ಅವರು ದೆಹಲಿಯಲ್ಲಿ ವಾರಾಂತ್ಯದಲ್ಲಿ ಕರ್ಫ್ಯೂ ಜಾರಿಗೆ ನಿರ್ಧಾರ ಮಾಡಲಾಗಿದೆ. ಕರ್ಫ್ಯೂ ವೇಳೆ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮಾಲ್‌ಗಳು, ಜಿಮ್‌ಗಳು, ಸ್ಪಾಗಳು ಮತ್ತು ಸಭಾಂಗಣ ಮುಚ್ಚಿರಲಿದ್ದು ಸಿನಿಮಾ ಥಿಯೇಟ್ ರ್ ಗೆ ಕೇವಲ 30% ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿವೆ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶವಿದ್ದು , ಹೋಟೆಲಲ್ಲೇ ಆಹಾರ ಸೇವನೆಗೆ ಅವಕಾಶ ಇಲ್ಲ ಎಂದು ದೆಹಲಿ ಸಿಎಂ ಹೇಳಿದ್ದಾರೆ.

ಮತ್ತೊಂದು ದಾಖಲೆ ಸೃಷ್ಟಿಸಿದ ಕೊರೊನಾ: ಒಂದೇ ದಿನಕ್ಕೆ 2 ಲಕ್ಷ ಮಂದಿಗೆ ಸೋಂಕು