ಆರೋಪ ಗೊತ್ತಿದ್ದರೂ ಎಫ್ಐಆರ್ ಆಗಿಲ್ಲ ಯಾಕೆ?: ಪರಂಬೀರ್ ಗೆ ಮುಳುವಾಯ್ತು ಅವರದ್ದೇ ಹೇಳಿಕೆ - BC Suddi
ಆರೋಪ ಗೊತ್ತಿದ್ದರೂ ಎಫ್ಐಆರ್ ಆಗಿಲ್ಲ ಯಾಕೆ?: ಪರಂಬೀರ್ ಗೆ ಮುಳುವಾಯ್ತು ಅವರದ್ದೇ ಹೇಳಿಕೆ

ಆರೋಪ ಗೊತ್ತಿದ್ದರೂ ಎಫ್ಐಆರ್ ಆಗಿಲ್ಲ ಯಾಕೆ?: ಪರಂಬೀರ್ ಗೆ ಮುಳುವಾಯ್ತು ಅವರದ್ದೇ ಹೇಳಿಕೆ

ಮುಂಬೈ: ಮಾಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರ ಮೇಲಿನ ಆರೋಪಗಳು ಗೊತ್ತಿದ್ದರೂ ತಾವು ಯಾಕೆ ವಾರ ಮೇಲೆ ಎಫ್​ಐಆರ್ ದಾಖಲಿಸಿಲ್ಲ ಎಂದು ಮುಂಬೈ ನಗರದ ಹಿಂದಿನ ಪೊಲೀಸ್ ಆಯುಕ್ತ ಪರಂ ಬೀರ್ ಸಿಂಗ್ ಅವರನ್ನು ಬಾಂಬೆ ಹೈಕೋರ್ಟ್ ಪ್ರಶ್ನೆ ಮಾಡಿದೆ. ಈ ನಡುವೆ ಎಫ್ಐಆರ್ ದಾಖಲಾಗದಿದ್ದರೂ ವಿಚಾರಣೆ ನಡೆಸಬಹುದು ಎಂದು ಪರಮ್​ವೀರ್ ಸಿಂಗ್ ಪರ ವಕೀಲರು ವಾದ ಮಂಡಿಸಿದ್ದಾರೆ.

ನೀವೊಬ್ಬ ಪೊಲೀಸ್ ಅಧಿಕಾರಿ. ನೀವು ಅಧಿಕಾರದಲ್ಲಿದ್ದಾಗ ತಪ್ಪು ನಡೆಯುತ್ತಿರುವುದು ಕಂಡರೆ ಎಫ್​ಐಆರ್ ದಾಖಲಿಸಬಹುದಿತ್ತು. ಯಾಕೆ ಆ ಕ್ರಮ ಕೈಗೊಳ್ಳಲಿಲ್ಲ? ಅಪರಾಧ ತಿಳಿದೂ ಎಫ್​ಐಆರ್ ದಾಖಲಿಸಿಲ್ಲ ಎಂದಾದರೆ ನೀವು ನಿಮ್ಮ ಕರ್ತವ್ಯದಲ್ಲಿ ಸೋತಂತೆ. ಮುಖ್ಯಮಂತ್ರಿಗಳಿಗೆ ಪತ್ರ ಬರೆದರಷ್ಟೇ ಸಾಲದು. ಯಾವುದೇ ನಾಗರಿಕನಿಗೆ ಅಪರಾಧ ಕಂಡುಬಂದರೆ ಎಫ್​ಐಆರ್ ದಾಖಲಿಸುವುದು ಆತನ ಕರ್ತವ್ಯ ಎಂದು ನ್ಯಾಯಪೀಠ ಹೇಳಿರುವ ಬಗ್ಗೆ ಲೈವ್ ಲಾ ವರದಿ ಮಾಡಿದೆ.

ಅಸ್ಸಾಂ ಮತ್ತೆ ಒಳ ನುಸುಳುಕೋರರ ಕೇಂದ್ರವಾಗಲು ಬಿಡುವುದಿಲ್ಲ : ಅಮಿತ್ ಶಾ

error: Content is protected !!