ನಾನು ಡಿ.ಸಿ ಗೆ ಕರೆ ಮಾಡಿದ್ದಾಗ ಏನೂ ತೊಂದರೆ ಇಲ್ಲ ಎಂದಿದ್ರು: ಸಂಸದ ಶ್ರೀನಿವಾಸ್ ಪ್ರಸಾದ್ - BC Suddi
ನಾನು ಡಿ.ಸಿ ಗೆ ಕರೆ ಮಾಡಿದ್ದಾಗ ಏನೂ ತೊಂದರೆ ಇಲ್ಲ ಎಂದಿದ್ರು: ಸಂಸದ ಶ್ರೀನಿವಾಸ್ ಪ್ರಸಾದ್

ನಾನು ಡಿ.ಸಿ ಗೆ ಕರೆ ಮಾಡಿದ್ದಾಗ ಏನೂ ತೊಂದರೆ ಇಲ್ಲ ಎಂದಿದ್ರು: ಸಂಸದ ಶ್ರೀನಿವಾಸ್ ಪ್ರಸಾದ್

ಮೈಸೂರು : ನಾನು ಚಾಮರಾಜನಗರ ಜಿಲ್ಲಾಧಿಕಾರಿಗೆ ರಾತ್ರಿ ಕರೆ ಮಾಡಿ ವಿಚಾರಿಸಿದ್ದೆ. ಆ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಇಲ್ಲಿ ಯಾವುದೇ ತೊಂದರೆ ಇಲ್ಲ ಅಂತ ಹೇಳಿದ್ರು ಎಂದು ಮೈಸೂರಿನಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.

ನಿನ್ನೆ ಡಿಸಿ ಜೊತೆ ಮಾತನಾಡಿದ ವೇಳೆ‌ ಆಕ್ಸಿಜನ್ ಕೊರತೆ ಬಗ್ಗೆ ನನಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿಲ್ಲ. ಕೋವಿಡ್ ಕಾರಣದಿಂದ ನಾನು ಚಾಮರಾಜನಗರಕ್ಕೆ ಹೋಗುತ್ತಿಲ್ಲ ಎಂದರು.

ಮೊದಲನೇ ಅಲೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವೇ ಚಾಮರಾಜನಗರ ಕೋವಿಡ್ ನಿರ್ವಹಣೆ ಬಗ್ಗೆ ಮೆಚ್ವುಗೆ ವ್ಯಕ್ತಪಡಿಸಿತ್ತು. ಆ ವೇಳೆ ಒಂದೇ ಒಂದು ಪ್ರಕರಣ ದಾಖಲಾಗಿರಲಿಲ್ಲ. ಈಗ ನಡೆದಿರುವ ಘಟನೆ ದುರದೃಷ್ಟಕರ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ವಿಷಾದ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ ದುರಂತ: ಇದು ಸಾವೋ? ಕೊಲೆಯೋ? ಎಂದ ರಾಹುಲ್ ಗಾಂಧಿ