ದಿಶಾ ರವಿ ಬಗ್ಗೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು? - BC Suddi
ದಿಶಾ ರವಿ ಬಗ್ಗೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ದಿಶಾ ರವಿ ಬಗ್ಗೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ಗುವಾಹಟಿ: ರೈತ ಹೋರಾಟದ ಟೂಲ್​ಕಿಟ್ ಪ್ರಕರಣದಲ್ಲಿ ಬಂಧಿತಳಾದ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಗ್ಗೆ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಮಾತನಾಡಿದ್ದಾರೆ. ಅಸ್ಸಾಂನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಅವರು ದಿಶಾ ಬಗ್ಗೆ ಮಾತನಾಡಿದ್ದಾರೆ.

ನಮ್ಮ ದೇಶದ ಪ್ರಧಾನಿಗೆ 22 ವರ್ಷದ ದಿಶಾ ರವಿಯ ಟ್ವೀಟ್​ ಬಗ್ಗೆ ಬೇಸರ ವ್ಯಕ್ತಪಡಿಸಲು ಆಗುತ್ತದೆ ಆದರೆ ಅವರಿಗೆ ಅಸ್ಸಾಂನಲ್ಲಾದ ಪ್ರವಾಹವಾಗಲೀ ಅಥವಾ ಸಿಎಎ ವಿಚಾರವಾಗಲಿ ಮಾತನಾಡಲು ಆಗುವುದಿಲ್ಲ ಎಂದು ಅವರು ದೂರಿದ್ದಾರೆ.

ಅಸ್ಸಾಂನಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ರಾಜ್ಯದಲ್ಲಿ ಚುನಾವಣೆ ಪ್ರಚಾರವನ್ನು ನಡೆಸುತ್ತಿದ್ದಾರೆ. ಜೋರ್ಹತ್​ನಲ್ಲಿ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ ಅವರು ಬಿಜೆಪಿಯನ್ನು ದೂರಿದ್ದಾರೆ. ಬಿಜೆಪಿ ಸರ್ಕಾರವು ನಮ್ಮ ದೇಶದ ಯುವ ಜನತೆಗೆ, ಕಾರ್ಮಿಕರಿಗೆ ಮತ್ತು ರೈತರಿಗೆ ಮೋಸ ಮಾಡುತ್ತಿದೆ. ಪ್ರಧಾನಿಯವರು ಯಾವತ್ತಾದರೂ ಅಸ್ಸಾಂನ ಟೀ ಎಸ್ಟೇಟ್​ಗೆ ಭೇಟಿ ನೀಡಿದ್ದಾರಾ? ಇಲ್ಲಿ ಕೆಲಸ ಮಾಡುವ ಮಹಿಳೆಯರ ಕಷ್ಟವನ್ನು ಆಲಿಸಿದ್ದಾರಾ? ಟೀ ಎಸ್ಟೇಟ್​ ಕೆಲಸಗಾರರಿಗೆ ದಿನಕ್ಕೆ 350 ರೂಪಾಯಿ ಕೂಲಿ ಕೊಡಿಸುವುದಾಗಿ ಹೇಳಿ ಅದನ್ನು ಮರೆತಿದ್ದಾರಲ್ಲಾ? ಅದರ ಬಗ್ಗೆ ಅವರಿಗೆ ಏನಾದರೂ ನೋವಿದೆಯೇ ಎಂದು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

error: Content is protected !!