ವಾಷಿಂಗ್ಟನ್‌ನ ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿದ ಕಾರು : ಪೊಲೀಸ್ ಅಧಿಕಾರಿ ಮೃತ್ಯು - BC Suddi
ವಾಷಿಂಗ್ಟನ್‌ನ ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿದ ಕಾರು : ಪೊಲೀಸ್ ಅಧಿಕಾರಿ ಮೃತ್ಯು

ವಾಷಿಂಗ್ಟನ್‌ನ ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿದ ಕಾರು : ಪೊಲೀಸ್ ಅಧಿಕಾರಿ ಮೃತ್ಯು

ವಾಷಿಂಗ್ಟನ್: ವ್ಯಕ್ತಿಯೊಬ್ಬ ಕಟ್ಟಡವೊಂದಕ್ಕೆ ಕಾರನ್ನು ವೇಗವಾಗಿ ನುಗ್ಗಿಸಿದ ಪರಿಣಾಮ, ಅಮೇರಿಕಾದ ಪೊಲೀಸ್ ಅಧಿಕಾರಿ ಓರ್ವರು ಮೃತಪಟ್ಟು, ಮತ್ತೊರ್ವ ಹಿರಿಯ ಅಧಿಕಾರಿ ಗಾಯಗೊಂಡ ಘಟನೆ ವಾಷಿಂಗ್ಟನ್‌ನಲ್ಲಿ ನಡೆದಿದೆ.

ಮೃತ ಪೊಲೀಸ್ ಅಧಿಕಾರಿ ಬಿಲ್ಲಿ ಇವಾನ್ಸ್ ಎಂದು ಗುರುತಿಸಲಾಗಿದ್ದು, 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ಇನ್ನು ಪೊಲೀಸ್ ಅಧಿಕಾರಿಗೆ ಗೌರವ ಸೂಚಕವಾಗಿ ಅಮೇರಿಕಾ ಕ್ಯಾಪಿಟಲ್ ಹಿಲ್ ಕಟ್ಟಡದಲ್ಲಿ ರಾಷ್ಟ್ರಧ್ವಜವನ್ನು ತಗ್ಗಿಸಲಾಯಿತು.

ಕಾರು ಚಾಲನೆ ಮಾಡಿದ ವ್ಯಕ್ತಿಯನ್ನು 25 ವರ್ಷದ ನೋವಾ ಗ್ರೀನ್ ಎಂದು ಗುರುತಿಸಲಾಗಿದ್ದು, ಆತನನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಅಮೆರಿಕ ಕ್ಯಾಪಿಟಲ್ ಪೊಲೀಸ್ (ಯುಎಸ್‌ಸಿಪಿ) ಮಾಹಿತಿ ನೀಡಿದೆ.

error: Content is protected !!