ಕೋಲ್ಕತ್ತ: ಕಳ್ಳನನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡಿದ ಗ್ರಾಮಸ್ಥರು - BC Suddi
ಕೋಲ್ಕತ್ತ: ಕಳ್ಳನನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡಿದ ಗ್ರಾಮಸ್ಥರು

ಕೋಲ್ಕತ್ತ: ಕಳ್ಳನನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡಿದ ಗ್ರಾಮಸ್ಥರು

ಕೋಲ್ಕತ್ತ: ಕಳ್ಳತನ ಪ್ರಕರಣದ ತನಿಖೆಗೆಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಬಿಹಾರ ಮೂಲದ ಪೊಲೀಸ್ ಅಧಿಕಾರಿಯನ್ನು ಗ್ರಾಮಸ್ಥರ ಗುಂಪೊಂದು ಹಿಗ್ಗಾ-ಮುಗ್ಗಾ ಥಳಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಬಂಗಾಳದ ಉತ್ತರ ದಿನಾಜ್ ಪುರದಲ್ಲಿ ನಡೆದಿದೆ.

ಬಿಹಾರದ ಕಿಶಾನ್ ಗಂಜ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಶ್ವಿನ್ ಕುಮಾರ್ ಎಂಬುವವರೇ ಕೊಲೆಯಾದ ದುರ್ದೈವಿ. ಕಳ್ಳನನ್ನು ಹಿಡಿಯುವ ಕಾರ್ಯಾಚರಣೆಗೆ ಹೋದಾಗ ಗ್ರಾಮದ ಜನರು ಗುಂಪಾಗಿ ಅಶ್ವಿನ್ ಕುಮಾರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ‌. ಚಿಕಿತ್ಸೆ ಫಲಕಾರಿಯಾಗದೇ ಅಶ್ವಿನ್ ಕುಮಾರ್ ಅಸುನೀಗಿದ್ದಾರೆ.

ಇನ್ನು ಅಶ್ವಿನ್ ಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಹಲ್ಲೆಕೋರರನ್ನು ಶೀಘ್ರದಲ್ಲಿ ಬಂಧಿಸೋದಾಗಿ ಅಲ್ಲಿನ ಐಜಿ ಪೂರ್ನಿಯಾ ರೇಂಜ್ ಹೇಳಿದ್ದಾರೆ.

ಕಣಿವೆ ರಾಜ್ಯದಲ್ಲಿ ಗುಂಡಿನ ಕಾಳಗ : 3 ಉಗ್ರರ ಹತ್ಯೆ