ಜೈಲಿಂದ ಹೊರಬಂದ ದಿನವೇ ಕಳ್ಳತನ ಮಾಡಿ ಮತ್ತೆ ಒಳಗೆ ಹೋದ - BC Suddi
ಜೈಲಿಂದ ಹೊರಬಂದ ದಿನವೇ ಕಳ್ಳತನ ಮಾಡಿ ಮತ್ತೆ ಒಳಗೆ ಹೋದ

ಜೈಲಿಂದ ಹೊರಬಂದ ದಿನವೇ ಕಳ್ಳತನ ಮಾಡಿ ಮತ್ತೆ ಒಳಗೆ ಹೋದ

ವಿರಾಜಪೇಟೆ: ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದ ಆತ ಅದೇ ದಿನ ಮತ್ತೊಂದು ಕಳ್ಳತನಾ ಮಾಡಿ ಮತ್ತೆ ಒಳಗೆ ಹೋಗಿದ್ದಾನೆ. ವಿರಾಜಪೇಟೆ ಸಮೀಪದ ಕದನೂರು ಗ್ರಾಮದ ಭಗವತಿ ದೇವಾಲಯದಲ್ಲಿ ಕಳವು ಮಾಡಿದ ಈತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಈ ಮುಂಚೆ ಕೊಡಗು ಜಿಲ್ಲೆಯಲ್ಲಿ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಬಂಧಿತನಾಗಿದ್ದ ಟಿ. ಕಾರ್ತಿಕ್ ಎಂಬಾತ ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.

ಮಾರ್ಚ್‌ 19 ರಂದು ರಾತ್ರಿ ಕದನೂರು ಗ್ರಾಮದ ಭಗವತಿ ದೇವಾಲಯದ ಭಂಡಾರವನ್ನು ಕಬ್ಬಿಣದ ಸಲಾಕೆಯಿಂದ ಒಡೆದು ಕಳ್ಳತನ ಮಾಡಲಾಗಿದೆ ಎಂದು ದೇವಾಲದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಕೆ. ಪ್ರಶಾಂತ್ ಅವರು ವಿರಾಜಪೇಟೆಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿ ಸಂಶಯದ ಮೇಲೆ ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!