ಹುಬ್ಬಳ್ಳಿ: ಅಧಿಕಾರಿಗಳಿಗೆ ಪ್ರಮೋದ್ ಮುತಾಲಿಕ್ ಖಡ್ಗದ ಎಚ್ಚರಿಕೆ ನೀಡಿದ್ದಾದರೂ ಯಾಕೆ...? - BC Suddi
ಹುಬ್ಬಳ್ಳಿ: ಅಧಿಕಾರಿಗಳಿಗೆ ಪ್ರಮೋದ್ ಮುತಾಲಿಕ್ ಖಡ್ಗದ ಎಚ್ಚರಿಕೆ ನೀಡಿದ್ದಾದರೂ ಯಾಕೆ…?

ಹುಬ್ಬಳ್ಳಿ: ಅಧಿಕಾರಿಗಳಿಗೆ ಪ್ರಮೋದ್ ಮುತಾಲಿಕ್ ಖಡ್ಗದ ಎಚ್ಚರಿಕೆ ನೀಡಿದ್ದಾದರೂ ಯಾಕೆ…?

ಹುಬ್ಬಳ್ಳಿ: ಶಿವಾಜಿ ಮೂರ್ತಿಯ ಬಗ್ಗೆ ನಿಷ್ಕಾಳಜಿ ತೋರಿದ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಖಡ್ಗದ ಎಚ್ಚರಿಕೆ ನೀಡಿದ್ದಾರೆ.

ಪಾಲಿಕೆ ಆವರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಗೂ ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಶಿವಾಜಿ ಮೂರ್ತಿ ನೆಲಕ್ಕೆ ಉರುಳಿದ ಬೆನ್ನಲ್ಲೇ ಮಹಾನಗರ ಪಾಲಿಕೆಗೆ ಭೇಟಿ ನೀಡಿದ ಪ್ರಮೋದ್ ಮುತಾಲಿಕ್ ಅವರು,ಕೂಡಲೇ ಶಿವಾಜಿ ಮೂರ್ತಿ ನಿರ್ಮಾಣ ಮಾಡಬೇಕು ಇಲ್ಲವಾದರೆ ನಿಮ್ಮೆಲ್ಲರಿಗೂ ಶಿವಾಜಿ ಖಡ್ಗವನ್ನು ತರಬೇಕಾಗುತ್ತದೇ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಸಿಮೆಂಟ್ ತುಕ್ಕಡಿಯೊಂದನ್ನು ಹಿಡಿದುಕೊಂಡು ಬಂದು ಪಾಲಿಕೆ ಅಧಿಕಾರಿಗಳಿಗೆ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ಮಾಡಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸೂರತ್‌ನಲ್ಲಿ ಒಬ್ಬ ತಂದೆ ತನ್ನ ಎರಡು ತಿಂಗಳ ಮಗುವಿಗೆ ಏನು ಗಿಪ್ಟ್ ಕೊಟ್ಟಿದ್ದಾರೆ ಗೊತ್ತಾ..?

error: Content is protected !!