ಸಂಸದೆಗೆ ಸಂಸದನಿಂದ ಬೆದರಿಕೆ ಆರೋಪ: ಆ್ಯಸಿಡ್ ದಾಳಿಯ ಎಚ್ಚರಿಕೆ - BC Suddi
ಸಂಸದೆಗೆ ಸಂಸದನಿಂದ ಬೆದರಿಕೆ ಆರೋಪ: ಆ್ಯಸಿಡ್ ದಾಳಿಯ ಎಚ್ಚರಿಕೆ

ಸಂಸದೆಗೆ ಸಂಸದನಿಂದ ಬೆದರಿಕೆ ಆರೋಪ: ಆ್ಯಸಿಡ್ ದಾಳಿಯ ಎಚ್ಚರಿಕೆ

ದೆಹಲಿ: ಅಮರಾವತಿ ಸಂಸದೆ ನವನೀತ್​ ಕೌರ್​ ರಾಣಾಗೆ ಇನ್ನೊಬ್ಬ ಸಂಸದನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೆಳಮನೆಯಲ್ಲಿ ನಾನು ಮಹಾರಾಷ್ಟ್ರ ಸರ್ಕಾರ ವಿರುದ್ಧ ಮಾತನಾಡಿದ್ದಕ್ಕಾಗಿ ಶಿವಸೇನೆಯ ಎಂಪಿ ಅರವಿಂದ್ ಸಾವಂತ್ ಅವರು ನನಗೆ ಲೋಕಸಭೆಯ ಮೊಗಸಾಲೆಯಲ್ಲಿ ಬೆದರಿಕೆ ಹಾಕಿದ್ದಾರೆ. ಈ ಘಟನೆ ನಂತರ ಶಿವಸೇನೆ ಪಕ್ಷದ ಲೆಟರ್​ಹೆಡ್​ ಇರುವ ಪತ್ರದ ಮೂಲಕ ಮತ್ತು ಫೋನ್​ ಕರೆಯ ಮೂಲಕ ಆ್ಯಸಿಡ್​ ದಾಳಿಯ ಬೆದರಿಕೆಗಳೂ ಬರುತ್ತಿವೆ ಎಂದು ನವನೀತ್​ ಕೌರ್​ ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ನಾಳೆ ಭೋಜನ ಕೂಟ ಏರ್ಪಡಿಸಿದ ಸಿದ್ದರಾಮಯ್ಯ

ಅಷ್ಟೇ ಅಲ್ಲ, ಸ್ಪೀಕರ್​ ಓಂ ಬಿರ್ಲಾರಿಗೆ ಪತ್ರವನ್ನೂ ಬರೆದಿದ್ದಾರೆ. ಇನ್ನು ನವನೀತ್ ಕೌರ್​ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಸಂಸದೆಯಾದವರು. ಆದರೆ ಸಿಂಧುಧುರ್ಗ್​ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅರವಿಂದ್ ಸಾವಂತ್​ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ನಾನು ಯಾವುದೇ ಬೆದರಿಕೆಯನ್ನೂ ಹಾಕಿಲ್ಲ. ಹಾಗೊಮ್ಮೆ ಇನ್ನೆಲ್ಲಿಂದಲಾದರೂ ಬೆದರಿಕೆ ಕರೆಗಳು ನವನೀತ್​ ಅವರಿಗೆ ಬರುತ್ತಿದ್ದರೆ, ಅವರ ಸಹಾಯಕ್ಕೆ ನಾನು ನಿಲ್ಲುತ್ತೇನೆ ಎಂದೂ ಹೇಳಿಕೊಂಡಿದ್ದಾರೆ.

error: Content is protected !!