ಚನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಹಾಗೂ ಎಐಎಡಿಎಂಕೆ ಪಕ್ಷದ ಉಚ್ಛಾಟಿತ ಮುಖ್ಯಸ್ಥೆ ವಿಕೆ ಶಶಿಕಲಾ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಯಾಗುವುದಾಗಿ ಬುಧವಾರ ಘೋಷಿಸಿದ್ದಾರೆ. ಬುಧವಾರ ಹೇಳಿಕೆ ಬಿಡುಗಡೆ ಮಾಡಿರುವ ಶಶಿಕಲಾ ಅವರು , ‘ನಾನು ರಾಜಕೀಯದಿಂದ ದೂರ ಉಳಿಯುತ್ತೇನೆ’ ಆದರೆ ಅಮ್ಮನ ಮಾರ್ಗದರ್ಶನದ ಅನುಸರಣೆಯಾಗಿ ನಡೆದುಕೊಳ್ಳುವೆ ಅಂತ ಹೇಳಿದ್ದಾರೆ.

“ನಾನು ರಾಜಕೀಯದಿಂದ ದೂರಉಳಿಯುತ್ತೇನೆ ಮತ್ತು ನನ್ನ ಸಹೋದರಿ ಜಯಲಲಿತಾ ಅವರನ್ನು ದೇವರೆಂದು ಪರಿಗಣಿಸುತ್ತೇನೆ ಮತ್ತು ಅಮ್ಮನ ಸುವರ್ಣವಧಿಯನ್ನು ಸ್ಥಾಪಿಸಲು ಸರ್ವಶಕ್ತನಾದ ದೇವರದಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.ತಮಿಳುನಾಡಿನ ಜನತೆಗೆ ಧನ್ಯವಾದ ಹೇಳಿದ ಶಶಿಕಲಾ, ಎಂದಿಗೂ ಅಧಿಕಾರ ಅಥವಾ ಸ್ಥಾನಮಾನದ ಗುರಿ ಯನ್ನು ಇಟ್ಟುಕೊಂಡಿಲ್ಲ ಮತ್ತು ಯಾವಾಗಲೂ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ. ನಾನು ಅಧಿಕಾರಕ್ಕಾಗಿ ಎಂದೂ ಹಂಬಲಿಸಲೇ ಇಲ್ಲ. ನಾನು ಎಂದಿಗೂ ಅವರಿಗೆ ಮತ್ತು ತಮಿಳುನಾಡಿನ ಜನತೆಗೆ ಚಿರಋಣಿಯಾಗಿರುತ್ತೇನೆ’ ಎಂದು ಅವರು ಹೇಳಿದರು. ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಪೂರ್ಣಗೊಂಡ ಬಳಿಕ ಸಕ್ರಿಯ ರಾಜಕಾರಣದಲ್ಲಿ ತೊಡಗುತ್ತೇನೆ ಎಂಬ ತಮ್ಮ ಹಿಂದಿನ ಹೇಳಿಕೆಯ ಯನ್ನು ಅವರು ಬದಲಾವಣೆ ಮಾಡಿಕೊಂಡಿದ್ದಾರೆ.