'ವೈರಸ್‌, ವಾಕ್ಸಿನ್' ‌: ಬಿಜೆಪಿ, ಕಾಂಗ್ರೆಸ್‌ ಟ್ವೀಟ್‌ ವಾರ್‌ - BC Suddi
‘ವೈರಸ್‌, ವಾಕ್ಸಿನ್’ ‌: ಬಿಜೆಪಿ, ಕಾಂಗ್ರೆಸ್‌ ಟ್ವೀಟ್‌ ವಾರ್‌

‘ವೈರಸ್‌, ವಾಕ್ಸಿನ್’ ‌: ಬಿಜೆಪಿ, ಕಾಂಗ್ರೆಸ್‌ ಟ್ವೀಟ್‌ ವಾರ್‌

ಬೆಂಗಳೂರು : ವೈರಸ್‌ ಹಾಗೂ ವಾಕ್ಸಿನ್‌ ವಿಚಾರದಲ್ಲೇ ಬಿಜೆಪಿ ಕಾಂಗ್ರೆಸ್‌ ನಡುವೆ ಟ್ವೀಟ್‌ ವಾರ್‌ ನಡೆದಿದೆ. ಆದರೆ ಕಾಂಗ್ರೆಸ್‌ ತಾನು ಟ್ವೀಟ್‌ ಮಾಡಿದ ಕೆಲವೇ ನಿಮಿಷದಲ್ಲಿ ಟ್ವೀಟ್‌ನ್ನು ಡಿಲೀಟ್‌ ಮಾಡಿದೆ. ಬಳಿಕ ಮತ್ತೆ ಟ್ವೀಟ್ ಮಾಡಿದ್ದು ಅದರಲ್ಲಿ ಆರ್‌ಎಸ್‌ಎಸ್ ಅನ್ನು  ವೈರಸ್ ಎಂದು ಹೇಳಿದೆ.

ಬಿಜೆಪಿ ಮೊದಲು ಟ್ವೀಟ್‌ ಮಾಡಿದ್ದು ಕಾಂಗ್ರೆಸ್‌ ಪಕ್ಷದ ಹಸ್ತ ಚಿಹ್ನೆಯನ್ನು ಉಲ್ಲೇಖಿಸಿ ವೈರಸ್‌ ಎಂದು ಹೇಳಿದ್ದು ವಾಕ್ಸಿನ್‌ ಎಂದು ಬಿಜೆಪಿಯ ಕಮಲದ ಚಿಹ್ನೆಯನ್ನು ಹಾಕುವ ಮೂಲಕ ಕಾಂಗ್ರೆಸ್ ವೈರಸ್‌ಗೆ ಲಸಿಕೆ ಬಿಜೆಪಿಯೆಂದು ಹೇಳಿದೆ. ಇದಕ್ಕೆ ಹಲವು ಪರ ವಿರೋಧ ಪ್ರತಿಕ್ರಿಯೆ ಲಭಿಸಿದೆ.

 

 

ಈ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಮನುಸ್ಮೃತಿ ಕೃತಿಯ ಚಿತ್ರವನ್ನು ಉಲ್ಲೇಖಿಸಿ ವೈರಸ್‌ ಎಂದು ಹೇಳಿದ್ದು ಬಿ ಆರ್‌ ಅಂಬೇಡ್ಕರ್‌ ರಚಿತ ಭಾರತದ ಸಂವಿಧಾನವನ್ನು ಆ ವೈರಸ್‌ಗೆ ಲಸಿಕೆ ಎಂದು ಹೇಳಿದೆ. ಆದರೆ ಈ ಟ್ವೀಟ್‌ ಮಾಡಿದ ಕೆಲವೇ ನಿಮಿಷದಲ್ಲಿ ಟ್ವೀಟ್‌ನ್ನು ಅಳಿಸಿ ಹಾಕಿದೆ.

ಬಳಿಕ ಮತ್ತೆ ಬೇರೆಯೇ ಟ್ವೀಟ್ ಮಾಡಿರುವ ಕಾಂಗ್ರೆಸ್, ಆರ್‌ಎಸ್‌ಎಸ್ ಅನ್ನು ವೈರಸ್ ಎಂದು ಹೇಳಿದ್ದು, ಕಾಂಗ್ರೆಸ್ ಆ ವೈರಸ್ ಗೆ ನೀಡುವ ವಾಕ್ಸಿನ್  ಎಂದಿದೆ.

ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಸದಾಶಿವರಾವ ಭೋಸಲೆ ನಿಧನ