ತಮ್ಮ ದಾಖಲೆಗಳಿಗೆ ಮತ್ತೊಂದು ಗರಿ ಸೇರಿಸಿದ್ದಾರೆ ನಾಯಕ ವಿರಾಟ್ ಕೊಹ್ಲಿ - BC Suddi
ತಮ್ಮ ದಾಖಲೆಗಳಿಗೆ ಮತ್ತೊಂದು ಗರಿ ಸೇರಿಸಿದ್ದಾರೆ ನಾಯಕ ವಿರಾಟ್ ಕೊಹ್ಲಿ

ತಮ್ಮ ದಾಖಲೆಗಳಿಗೆ ಮತ್ತೊಂದು ಗರಿ ಸೇರಿಸಿದ್ದಾರೆ ನಾಯಕ ವಿರಾಟ್ ಕೊಹ್ಲಿ

ಅಹಮದಾಬಾದ್:ಅಹಮದಾಬಾದ್‌ನ ಮೋದಿ ಕ್ರೀಡಾಂಗಣದಲ್ಲಿ ನಡೆದ 2 ನೇ ಟಿ 20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ 49 ಎಸೆತಗಳಲ್ಲಿ 73 ರನ್ ಗಳಿಸಿ ಅಂತರರಾಷ್ಟ್ರೀಯ ಟಿ 20 ಕ್ರಿಕೆಟ್‌ನಲ್ಲಿ 3,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತದ ನಾಯಕ ವಿರಾಟ್ ಕೊಹ್ಲಿ ತಮ್ಮ ದಾಖಲೆಗಳಿಗೆ ಮತ್ತೊಂದು ಗುರಿ ಸೇರಿಸಿದ್ದಾರೆ.

ಅಂತರರಾಷ್ಟ್ರೀಯ ಟಿ 20 ಪಂದ್ಯಗಳಲ್ಲಿ3001 ರನ್ ಗಳಿಸಿದ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನ ದಲ್ಲಿದ್ದಾರೆ. ಕೋಹ್ಲಿ ನಂತರ ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್ 2839 ರನ್ ಗಳಿಸಿದ್ದಾರೆ. ಭಾರತದ ಟಿ 20 ವೈಸ್ ಕ್ಯಾಪ್ಟನ್ ರೋಹಿತ್ ಶರ್ಮಾ2,773 ರನ್ ಗಳಿಸಿ ೩ ನೇ ಸ್ಥಾನದಲ್ಲಿದ್ದಾರೆ. ಅರ್ಧಶತಕವನ್ನು ಗಳಿಸಿದ ಕೊಹ್ಲಿ ಮತ್ತು ಇಶಾನ್ ಕಿಶನ್ ಸಹ ಐದು ಪಂದ್ಯಗಳ ಸರಣಿಯನ್ನು 1-1ರಲ್ಲಿ ಸಮಬಲಗೊಂಡಿದ್ದು ಭರ್ಜರಿ ಆಟವಾಡಿದರು.

 

error: Content is protected !!