ದಕ್ಷಿಣ ಆಫ್ರಿಕಾ : ಪ್ರಪಂಚದಾದ್ಯಂತ ಕೊರೊನಾ ವೈರಸ್ ಹಾವಳಿ ನಿಲ್ಲದ ಕಾರಣ ಮಾಸ್ಕ್​ ಬಳಕೆ ಕಡ್ಡಾಯಗೊಳಿಸಲಾಗಿದ್ದು, ಮಾಲ್​, ಸೂಪರ್ ಮಾರ್ಕೆಟ್ ಸೇರಿ ಹೊರಗಡೆ ಹೋಗಬೇಕಾದರೆ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.

ಆದರೆ ಮಾಸ್ಕ್​ ಮರೆತು ಸೂಪರ್ ಮಾರ್ಕೆಟ್​ಗೆ ಬಂದ ಯುವತಿಯೋರ್ವಳನ್ನ ಸಿಬ್ಬಂದಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಗಲಿಬಿಲಿಗೊಂಡು ಹಾಕಿಕೊಂಡಿದ್ದ ಅಂಡರ್​​ವೇರ್​ ತೆಗೆದು ಮಾಸ್ಕ್ ಮಾಡಿಕೊಂಡಿರುವ ಘಟನೆ ನಡೆದಿದೆ.ದಕ್ಷಿಣ ಆಫ್ರಿಕಾದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಇದರ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ಸೂಪರ್ ಮಾರ್ಕೆಟ್​ಗೆ ಮಾಸ್ಕ್ ಮರೆತು ಬಂದಿರುವ ಯುವತಿಯೋರ್ವಳನ್ನ ಅಲ್ಲಿನ ಸಿಬ್ಬಂದಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಒಳ ಉಡುಪು ತೆಗೆದು ಮಾಸ್ಕ್​ ರೀತಿಯಲ್ಲಿ ಮುಖಕ್ಕೆ ಹಾಕಿಕೊಂಡಿದ್ದಾಳೆ. ಸದ್ಯ ಇದರ ವಿಡಿಯೋ ವೈರಲ್​ ಆಗಿದ್ದು, ಲಕ್ಷಾಂತರ ಜನರು ವಿಡಿಯೋ ವೀಕ್ಷಣೆ ಮಾಡಿದ್ದಾರೆ.