ಬೆಂಗಳೂರು: ಭಾರತ ತಂಡವನ್ನು ಎಲ್ಲ 3 ಮಾದರಿಯ ಕ್ರಿಕೆಟ್ ನಲ್ಲಿ ಪ್ರತಿನಿಧಿಸಿದ್ದ ವೇಗದ ಬೌಲರ್ ವಿನಯಕುಮಾರ್ ಶುಕ್ರವಾರ ಕ್ರಿಕೆಟ್‍ನಿಂದ ನಿವೃತ್ತಿಯಾದರು.

ಕರ್ನಾಟಕ ತಂಡ ಸತತವಾಗಿ ರಣಜಿ ಟ್ರೋಫಿ ಜಯಿಸಲು ನಾಯಕತ್ವವಹಿಸಿದ್ದ ‘ದಾವಣಗೆರೆ ಎಕ್ಸ್ ಪ್ರೆಸ್’ ಖ್ಯಾತಿಯ ವಿನಯಕುಮಾರ್, ವೃತ್ತಿಬದುಕಿನುದ್ದಕ್ಕೂ ನಿಮ್ಮ ಬೆಂಬಲ ಹಾಗೂ ಪ್ರೀತಿಗೆ ಧನ್ಯವಾದ. ನಾನು ಇಂದು ನಿವೃತ್ತಿಯಾಗುತ್ತಿರುವೆ ಎಂದು ಟ್ವೀಟಿಸಿದರು.

37ರ ಹರೆಯದ ವಿನಯಕುಮಾರ್, 2010 ಹಾಗೂ 2013ರ ನಡುವೆ ಭಾರತದ ಪರವಾಗಿ 1 ಟೆಸ್ಟ್, 31 ಏಕದಿನ ಹಾಗೂ 9ಟಿ-20 ಪಂದ್ಯಗಳನ್ನು ಆಡಿದ್ದರು.