ಉಪ ಚುನಾವಣೆ ನಂತರ ಸರ್ಕಾರ ಪತನ: ವೀಣಾ ಕಾಶಪ್ಪನವರ್ - BC Suddi
ಉಪ ಚುನಾವಣೆ ನಂತರ ಸರ್ಕಾರ ಪತನ: ವೀಣಾ ಕಾಶಪ್ಪನವರ್

ಉಪ ಚುನಾವಣೆ ನಂತರ ಸರ್ಕಾರ ಪತನ: ವೀಣಾ ಕಾಶಪ್ಪನವರ್

ಬೆಳಗಾವಿ-ಸೈನಿಕರನ್ನು ಮುಂದಿಟ್ಟಿಕೊಂಡು ಬಿಜೆಪಿ ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಜನವಿರೋಧಿ ಹಾಗೂ ರೈತವಿರೋಧಿ ಸರ್ಕಾರ ಇದೆ. ಸಾಮಾನ್ಯರನ್ನು ತುಳಿಯುವ ಹುನ್ನಾರ ನಡೆದಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ್ ಹೇಳಿದ್ರು.

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ರಾಜ್ಯ ಸರ್ಕಾರದ ಬಜೆಟ್ ಯಾರಿಗೂ ಅನುಕೂಲವಾಗಿಲ್ಲ. ರಾಜ್ಯ ಸರ್ಕಾರ ಶೇ.50 ಕಮಿಷನ್ ಸರ್ಕಾರವಾಗಿದೆ. ರಾಜ್ಯದ ಬಿಜೆಪಿ ಸಚಿವರಲ್ಲಿ ಹೊಂದಾಣಿಕೆ ಕೊರತೆ ಇದೆ. ಬಿಜೆಪಿ ಸರ್ಕಾರದ ಕಾರ್ಯವೈಖರಿ ನೋಡಿದ್ರೆ ಇದು ಪತನವಾಗುವುದರಲ್ಲಿ ಎರಡು ಮಾತಿಲ್ಲ. ಉಪ ಚುನಾವಣೆಯ ಬಳಿಕ ರಾಜ್ಯ ಬಿಜೆಪಿ ಸರ್ಕಾರ ಪತನಗೊಳ್ಳುತ್ತದೆ ಎಂದು ವೀಣಾ ಕಾಶಪ್ಪನವರ್ ಹೇಳಿದರು.

ಏಪ್ರಿಲ್ 17ರ ನಂತರ ಬಿಜೆಪಿ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ರೊಚ್ಚಿಗೇಳುತ್ತಾರೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ್

error: Content is protected !!