ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ  ಸಹೋದರಿ ಯಾರು ಗೊತ್ತಾ..? - BC Suddi
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ  ಸಹೋದರಿ ಯಾರು ಗೊತ್ತಾ..?

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ  ಸಹೋದರಿ ಯಾರು ಗೊತ್ತಾ..?

ಒಂದು ಕುಟುಂಬದಲ್ಲಿ ಯಾರಾದರೂ ಒಬ್ಬರು ರಾಜಕೀಯಕ್ಕೆ ಎಂಟ್ರಿ ನೀಡಿದರೆ ಅವರ ಇಡೀ ಕುಟುಂಬ ಬದಲಾಗಿ ಬಿಡತ್ತೆ ಎನ್ನುವ ಮಾತು ಎಲ್ಲೇಡೆ ಸಾಮಾನ್ಯ ಆದ್ರೆ ಯೋಗಿ ಕುಟುಂಬದಲ್ಲಿ ಹಾಗಾಗಿಲ್ಲ. ಹೌದು ಯೋಗಿ ಆದಿತ್ಯನಾಥ್ ದೇಶದ ಅತಿದೊಡ್ಡ ರಾಜ್ಯ ಉತ್ತರಪ್ರದೇಶದ ಮುಖ್ಯಮಂತ್ರಿ. ಆದರೆ ಭಾರತೀಯ ಜನತಾ ಪಕ್ಷದ ಈ ಮುಖಂಡರ ಸಹೋದರಿ ಶಶಿ ಜೀವನೋಪಾಯಕ್ಕಾಗಿ ಹೂವುಗಳನ್ನು ಮಾರುತ್ತಾರೆ ಮತ್ತು ಚಿಕ್ಕ ಅಂಗಡಿಯನ್ನು ನಡೆಸುತ್ತಾರೆ ಎನ್ನುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾದರೂ ಸತ್ಯ.

ತಮ್ಮ ಸಹೋದರ ಯೋಗಿ ಆದಿತ್ಯನಾಥ್ ಸಿಎಂ ಆದ ನಂತರವೂ ತನ್ನ ಜೀವನದಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಅವರು ಹೇಳುತ್ತಾರೆ. ಯೋಗಿ ಆದಿತ್ಯನಾಥ್ ಅವರ ಸಹೋದರಿ ಶಶಿ ಮತ್ತು ಅವರ ಪತಿ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಕುಥರ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಈ ಹಳ್ಳಿಯಲ್ಲಿ, ಇಬ್ಬರು ಒಟ್ಟಿಗೆ ಒಂದು ಸಣ್ಣ ಅಂಗಡಿಯನ್ನು ನಡೆಸುತ್ತಾರೆ. ಶಶಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಜೋಪಾಡಿಯಲ್ಲಿ ವಾಸಿಸುವ ಇವರು ಹೂವುಗಳು, ಪ್ರಸಾದ, ಬಿಸ್ಕತ್ತು, ಚಹಾ ಇತ್ಯಾದಿಗಳನ್ನು ಮಾರುತ್ತಾರೆ. ಶಶಿ ಯೋಗಿ ಆದಿತ್ಯನಾಥ್ ಗಿಂತ ಆರು ವರ್ಷ ಹಿರಿಯರು.

ಯೋಗಿ ಆದಿತ್ಯನಾಥ್ ಸನ್ಯಾಸ ಸ್ವೀಕರಿಸುವ ಮೊದಲು ಮನೆಯಲ್ಲಿದ್ದಾಗ, ನನ್ನ ಕೈಯಿಂದ ಮಾಡಿದ ಆಹಾರವನ್ನು ಸೇವಿಸುತ್ತಿದ್ದರು. ಆದರೆ ಸನ್ಯಾಸ ಸ್ವೀಕರಿಸಿದ ಬಳಿಕ ಅವರು ಮನೆಯ ಆಹಾರವನ್ನು ಸೇವಿಸಿಲ್ಲ. ಅವರನ್ನು ಕೊನೆಯ ಬಾರಿಗೆ ಫೆಬ್ರವರಿ 11, 2017 ರಂದು ಚುನಾವಣೆಗೆ ಸಂಬಂಧಿಸಿದಂತೆ ಪ್ರದೇಶಕ್ಕೆ ಬಂದಾಗ ಭೇಟಿಯಾಗಿದ್ದೆ. ಅವರು ಭೇಟಿಯಾದಾಗ ಮಕ್ಕಳೊಂದಿಗೆ ಮಾತನಾಡುತ್ತಾರೆ, ಆದರೆ ಹಿರಿಯರೊಂದಿಗೆ ಮಾತನಾಡುವುದಿಲ್ಲ ಎಂದು ಶಶಿ ಹೇಳುತ್ತಾರೆ. ಯೋಗಿ ಆದಿತ್ಯನಾಥ್ ಅವರ ನಿಜವಾದ ಹೆಸರು ಅಜಯ್ ಸಿಂಗ್ ಬಿಶ್ತ್.

ಅವರಿಗೆ ಸನ್ಯಾಸ ದೀಕ್ಷೆ ನೀಡಿದ ಬಳಿಕ ಯೋಗಿ ಆದಿತ್ಯನಾಥ್ ಎಂದು ಹೆಸರಿಡಲಾಗಿದೆ. ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಯೋಗಿಯ ಸಹೋದರಿ ಶಶಿ, ತೇವವಾದ ಕಣ್ಣುಗಳೊಂದಿಗೆ, ಯೋಗಿಯನ್ನು ಶಾಲೆಯಿಂದ ಕರೆತರುವ ಮತ್ತು ಕರೆದೊಯ್ಯುವ ಕೆಲಸವನ್ನು ಮಾಡಿದ್ದೇನೆ ಎಂದು ಹೇಳುತ್ತಾರೆ. ತನ್ನ ಸಹೋದರ ಚೆನ್ನಾಗಿ ಕೆಲಸ ಮಾಡುವುದನ್ನು ನೋಡಲು ಮಾತ್ರ ಬಯಸುತ್ತೇನೆ ಎಂದು ಹೇಳುತ್ತಾರೆ.

error: Content is protected !!