ಗಂಡ ಇದ್ದರೂ ಬೇಕಂತೆ ಬಾಯ್ ಫ್ರೆಂಡ್: ರೌಡಿ ಗಂಡ ಮಾಡಿದ ಅನ್ ಫ್ರೆಂಡ್ - BC Suddi
ಗಂಡ ಇದ್ದರೂ ಬೇಕಂತೆ ಬಾಯ್ ಫ್ರೆಂಡ್: ರೌಡಿ ಗಂಡ ಮಾಡಿದ ಅನ್ ಫ್ರೆಂಡ್

ಗಂಡ ಇದ್ದರೂ ಬೇಕಂತೆ ಬಾಯ್ ಫ್ರೆಂಡ್: ರೌಡಿ ಗಂಡ ಮಾಡಿದ ಅನ್ ಫ್ರೆಂಡ್

ಮಂಡ್ಯ: ರೌಡಿ ಶೀಟರ್ ಒಬ್ಬನನ್ನು ಲವ್ ಮಾಡಿದ್ದ ಆಕೆ 8 ವರ್ಷಗಳ ಹಿಂದೆಯೇ ಮನೆ ಬಿಟ್ಟು ಬಂದು ಮದುವೆ ಆಗಿದ್ದಳು. ಪ್ರೇಮದ ಫಲವಾಗಿ ಈ ದಂಪತಿಗೆ ಗಂಡು ಮಗು ಕೂಡ ಇತ್ತು. ಎಲ್ಲವೂ ಸಾಂಗವಾಗಿ ಸಾಗಿತ್ತು. ಆಗ ಅಲ್ಲಿ ಬಂದ ನೋಡಿ ಆ ಬಾಯ್ ಫ್ರೆಂಡ್. ಅವನೊಂದಿಗೆ ಸುಖ-ಸಾಂಗತ್ಯ ಬೆಳೆಸಿಕೊಂಡ ಈಕೆ ಲವ್ವಿ-ಡವ್ವಿ ಶುರು ಹಚ್ಚಿಕೊಂಡಿದ್ದಾಳೆ. ಇದೆಲ್ಲ ಗಂಡನಿಗೆ ಗೊತ್ತಾದ ಮೇಲೆ ಆಕೆ ಈಗ ತನ್ನ ಇನಿಯನ ಜೊತೆ ಆಸ್ಪತ್ರೆ ಪಾಲಾಗಿದ್ದಾಳೆ. ಉಳಿದ ಕತೆ ಮುಂದೆ ಹೇಳ್ತೀವಿ ಓದಿ.

ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮ ಹರ್ಷಿತಾ ಶಾಲೆಯಲ್ಲಿ ಓದುವಾಗಲೇ ರೌಡಿ ಶೀಟರ್ ನಾಗೇಂದ್ರ ಅಲಿಯಾಸ್ ಕುಳ್ಳನಾಗ ಎಂಬಾತನ ಪ್ರೇಮ ಪಾಶಕ್ಕೆ ಬಲಿಯಾಗಿದ್ದಳು. ಸುಮಾರು 6 ವರ್ಷ ಪ್ರೀತಿಯಲ್ಲಿ ತೇಲಾಡಿದ್ದ ಆ ಜೋಡಿಯ ಮದುವೆಗೆ ಹೆತ್ತವರು ವಿರೋಧ ವ್ಯಕ್ತಪಡಿಸಿದ್ರು. ಬಳಿಕ ಮನೆ ಬಿಟ್ಟೋಗಿ ಮದುವೆಯಾಗಿದ್ರು.

ಹೀಗಿರುವಾಗಲೇ ಬಂದ ನೋಡಿ ಕುಳ್ಳನಾಗನ ಸ್ನೇಹಿತ ಚೇತನ್. ಮದುವೆ ಆದ ಹೊಸತರಲ್ಲಿ ಕುಳ್ಳನಾಗ ಹಾಗೂ ಹರ್ಷಿತಾಗೆ ಹೆಲ್ಪ್ ಮಾಡುವ ನೆಪದಲ್ಲಿ ಆಗಾಗ ಮನೆಗೆ ಬಂದು ಹೋಗ್ತಿದ್ದ. ಇದೇ ವೇಳೇ ಹೇಗೋ ಏನೋ ಹರ್ಷಿತಾಳ ಹೃದಯ ಕದ್ದಿದ್ದಾನೆ. ಈಕೆಯೂ ಅವನ ಕಡೆ ಮನಸು ಮಾಡಿದ್ದಾಳೆ. ಈ ವಿಚಾರ ಗೊತ್ತಾಗಿ ಕುಳ್ಳನಾಗ, ತನ್ನ ಸ್ನೇಹಿತ ಚೇತನ್ ಮೇಲೆ ಮೂರು ವರ್ಷದ ಹಿಂದೆ ಹಲ್ಲೆ ಮಾಡಿದ್ದ. ಆಗ ಇದು ಕೇಸ್ ಆದ ಪರಿಣಾಮ ಒಂದು ವರ್ಷ ಜೈಲೊಳಗೆ ಇದ್ದು ಬಂದಿದ್ದ. ಇಷ್ಟಾದರೂ ಇತ್ತ ಹರ್ಷಿತಾ ಹಾಗೂ ಚೇತನ್ ಸಂಬಂಧ ಮುಂದುವರೆದೇ ಇತ್ತು.

ಏಪ್ರಿಲ್ 4ನೇ ತಾರೀಕು ಹರ್ಷಿತಾ ಮನೆಗೆ ಚೇತನ್ ಬಂದಿದ್ದ. ಈ ವೇಳೆ ಮನೆಗೆ ಬಂದ ಕುಳ್ಳ ನಾಗನಿಗೆ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ರು. ಇದ್ರಿಂದ ಕೋಪಗೊಂಡ ಕುಳ್ಳನಾಗ ತನ್ನ ಸ್ನೇಹಿತ ಯೋಗೇಶ್ ಜೊತೆ ಸೇರಿ ಚೇತನ್‍ಗೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಹೆಂಡತಿ ಮೇಲೂ ಹಲ್ಲೆ ನಡೆಸಿದ್ದು, ಅಷ್ಟರಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಹಲ್ಲೆ ಮಾಡುತ್ತಿರೋದನ್ನ ತಡೆದಿದ್ದಾರೆ.

ಘಟನೆ ಸಂಬಂಧ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಗಂಭೀರವಾಗಿ ಗಾಯಗೊಂಡಿರೊ ಚೇತನ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಹಲ್ಲೆ ನಡೆಸಿದ ಕುಳ್ಳನಾಗ ಹಾಗೂ ಆತನ ಸ್ನೇಹಿತ ಯೋಗೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

error: Content is protected !!