ಪ್ರಧಾನಿ ಮೋದಿ ಚಿತ್ರಹಿಂಸೆಯಿಂದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಸಾವನ್ನಪ್ಪಿದ್ರು: ಉದಯನಿಧಿ - BC Suddi
ಪ್ರಧಾನಿ ಮೋದಿ ಚಿತ್ರಹಿಂಸೆಯಿಂದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಸಾವನ್ನಪ್ಪಿದ್ರು: ಉದಯನಿಧಿ

ಪ್ರಧಾನಿ ಮೋದಿ ಚಿತ್ರಹಿಂಸೆಯಿಂದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಸಾವನ್ನಪ್ಪಿದ್ರು: ಉದಯನಿಧಿ

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಡ ಹಾಗೂ ಚಿತ್ರಹಿಂಸೆ ತಾಳಲಾರದೇ ಕೇಂದ್ರ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಹೇಳಿದ್ದಾರೆ. ಈ ಹೇಳಿಕೆ ಈಗ ಭಾರೀ ಟೀಕೆ ವ್ಯಕ್ತವಾಗಿದೆ.

ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಧಾರಾಪುರಂ ಚುನಾವಣಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಎಷ್ಟೋ ಹಿರಿಯ ನಾಯಕರನ್ನು ಹಿಂದೆ ಹಾಕಿ ನಾಯಕ ಸ್ಥಾನಕ್ಕೆ ಬಂದುಬಿಟ್ಟಿದ್ದಾರೆ. ಉದಯನಿಧಿ ಪಕ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಪಕ್ಷದಲ್ಲಿದ್ದ ಹಲವು ನಾಯಕರನ್ನು ಕಡೆಗಣಿಸಲಾಗುತ್ತಿದೆ” ಎಂದು ಆರೋಪಿಸಿದ್ದರು.

ಆಲಿಯಾ ಭಟ್‌ಗೆ ಕೊರೊನಾ ಪಾಸಿಟಿವ್

ಪ್ರಧಾನಿ ಮೋದಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಉದಯನಿಧಿ, “ಕೇಂದ್ರ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರು ಮೋದಿ ಅವರ ಒತ್ತಡ ಹಾಗೂ ಚಿತ್ರಹಿಂಸೆ ತಾಳಲಾರದೇ ಸಾವನ್ನಪ್ಪಿದ್ದಾರೆ. ಎಲ್‌.ಕೆ. ಅಡ್ವಾನಿ, ಮುರಳಿ ಮನೋಹರ್ ಜೋಶಿ, ವೆಂಕಯ್ಯ ನಾಯ್ಡು ಹಾಗೂ ಇತರರೆ ನಾಯಕರನ್ನು ಮೋದಿಯವರು ಕಡೆಗಣಿಸುತ್ತಿದ್ದಾರೆ” ಎಂದು ಹೇಳಿದ್ದಾರೆ. ಉಯಯನಿಧಿ ಹೇಳಿಕೆ ಕುರಿತು ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಕಿಡಿಕಾರಿದ್ದಾರೆ.

error: Content is protected !!