ತಾಯಂದಿರ ಅಂತ್ಯಸಂಸ್ಕಾರ ನೆರವೇರಿಸಿದ ಮರುಕ್ಷಣವೇ ಕರ್ತವ್ಯಕ್ಕೆ ಮರಳಿದ ಇಬ್ಬರು ವೈದ್ಯರು - BC Suddi
ತಾಯಂದಿರ ಅಂತ್ಯಸಂಸ್ಕಾರ ನೆರವೇರಿಸಿದ ಮರುಕ್ಷಣವೇ ಕರ್ತವ್ಯಕ್ಕೆ ಮರಳಿದ ಇಬ್ಬರು ವೈದ್ಯರು

ತಾಯಂದಿರ ಅಂತ್ಯಸಂಸ್ಕಾರ ನೆರವೇರಿಸಿದ ಮರುಕ್ಷಣವೇ ಕರ್ತವ್ಯಕ್ಕೆ ಮರಳಿದ ಇಬ್ಬರು ವೈದ್ಯರು

ಗಾಂಧಿನಗರ: ಕೋವಿಡ್-19ಗೆ ಬಲಿಯಾದ ತಾಯಂದಿರ ಅಂತ್ಯಸಂಸ್ಕಾರ ನೆರವೇರಿಸಿದ ಇಬ್ಬರು ವೈದ್ಯರು ಮರುಕ್ಷಣವೇ ಪಿಪಿಇ ಕಿಟ್ ಧರಿಸಿ ಕೊರೊನಾ ಸೋಂಕಿತರ ಜೀವರಕ್ಷಣೆ ಕಾರ್ಯಕ್ಕೆ ಧುಮುಕಿದ್ದಾರೆ. ಅವರ ಈ ನಿರ್ಧಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವೈದ್ಯೆ ಶಿಲ್ಪಾ ಪಟೇಲ್ ಅವರ ತಾಯಿ ಕಾಂತಾ ಅಂಬಾಲಾಲ್ ಪಟೇಲ್ (77) ಗುರುವಾರ ಮುಂಜಾನೆ 3:30ಕ್ಕೆ ಕೊರೊನಾದಿಂದ ಸಾವನ್ನಪ್ಪಿದ್ದರು. ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಜಿ ಆಸ್ಪತ್ರೆಯ ದೇಹರಚನಾ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿಯಾಗಿರುವ ಶಿಲ್ಪಾ, ಕೇವಲ ಆರು ಗಂಟೆಯ ಅಂತರದಲ್ಲಿ ಮತ್ತೆ ಜೀವರಕ್ಷಣೆ ಕಾರ್ಯಕ್ಕೆ ಧುಮುಕಿದರು.

ಡಾ.ರಾಹುಲ್ ಪರ್ಮಾರ್ ಕೂಡಾ ತಮ್ಮ ತಾಯಿ ಕಾಂತಾ ಪರ್ಮಾರ್ (67) ಅವರನ್ನು ಕಳೆದುಕೊಂಡರು. ಕೋವಿಡ್ ನಿರ್ವಹಣೆಯ ನೋಡಲ್ ಅಧಿಕಾರಿಯಾಗಿ ಮತ್ತು ಮೃತದೇಹಗಳ ವಿಲೇವಾರಿ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ರಾಹುಲ್, ತಮ್ಮ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿ ನೇರವಾಗಿ ಕರ್ತವ್ಯಕ್ಕೆ ಮರಳಿದರು. ಈ ಇಬ್ಬರು ವೈದ್ಯರ ನಿಸ್ವಾರ್ಥ ಸೇವೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

‘ಕೊರೊನಾ ನಿಯಂತ್ರಣಕ್ಕೆ ಟೆಸ್ಟ್, ಟ್ರ್ಯಾಕ್, ಟ್ರೀಟ್ ಏಕೈಕ ಮಾರ್ಗ’ – ಪ್ರಧಾನಿ ಮೋದಿ