ಎರಡು ದಿನ ಬ್ಯಾಂಕ್ ಮುಷ್ಕರ: ಬ್ಯಾಂಕ್‌ಗಳ ಸೇವೆಗೆ ಅಡ್ಡಿಯಾಗುವ ಸಾಧ್ಯತೆ ..! - BC Suddi
ಎರಡು ದಿನ ಬ್ಯಾಂಕ್ ಮುಷ್ಕರ: ಬ್ಯಾಂಕ್‌ಗಳ ಸೇವೆಗೆ ಅಡ್ಡಿಯಾಗುವ ಸಾಧ್ಯತೆ ..!

ಎರಡು ದಿನ ಬ್ಯಾಂಕ್ ಮುಷ್ಕರ: ಬ್ಯಾಂಕ್‌ಗಳ ಸೇವೆಗೆ ಅಡ್ಡಿಯಾಗುವ ಸಾಧ್ಯತೆ ..!

ನವದೆಹಲಿ: ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟವಾಗಿರುವ ಯುಎಫ್‌ಬಿಯು ಮಾ.15 ಹಾಗೂ ಮಾ.26ರಂದು ಮುಷ್ಕರ ನಡೆಸಲು ಕರೆ ನೀಡಿದೆ. ಇದರಿಂದ ಬ್ಯಾಂಕ್‌ಗಳ ಸೇವೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಖಾಸಗೀಕರಣ ವಿರೋಧಿಸಿ ರಾಷ್ಟ್ರವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಬ್ಯಾಂಕ್ ಶಾಖೆಗಳ ಹಾಗೂ ಕಛೇರಿಗಳ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಉಂಟಾಗದ0ತೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಮುಷ್ಕರದ ಕಾರಣ ದೈನಂದಿನ ಕಾರ್ಯಚಟುವಟಿಕೆಯ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರು, ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಲು ಪ್ರಸ್ತಾಪಿಸಿದ ತೀರ್ಮಾನವನ್ನು ವಿರೋಧಿಸಿರುವ ಬ್ಯಾಂಕ್ ಒಕ್ಕೂಟಗಳು ಪ್ರತಿಭಟನೆ ಕೈಗೊಂಡಿವೆ. ಠೇವಣಿ ಸೇರಿದಂತೆ ಶಾಖೆಗಳಲ್ಲಿ ವಾಪಾಸಾತಿ, ಚೆಕ್ ಕ್ಲಿಯರೆನ್ಸ್ ಹಾಗೂ ಸಾಲದ ಅನುಮೋದನೆಗಳು ಮೇಲೆ ಪರಿಣಾಮ ಬೀರಲಿವೆ. ಎಟಿಎಂ ಸೇವೆಗಳು ಮುಂದುವರೆಯಲಿವೆ. “ಮುಷ್ಕರದಲ್ಲಿ ಬ್ಯಾಂಕ್‌ಗಳ 10 ಲಕ್ಷ ನೌಕರರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ” ಎಂದ ಯುಎಫ್‌ಬಿಯು ತಿಳಿಸಿದೆ.

error: Content is protected !!