ಕಾಂಗ್ರೆಸ್ ವಿರುದ್ಧ ಟ್ವೀಟ್ ವಾರ್ ಮುಂದುವರಿಸಿದ ರಾಜ್ಯ ಬಿಜೆಪಿ..! - BC Suddi
ಕಾಂಗ್ರೆಸ್ ವಿರುದ್ಧ ಟ್ವೀಟ್ ವಾರ್ ಮುಂದುವರಿಸಿದ ರಾಜ್ಯ ಬಿಜೆಪಿ..!

ಕಾಂಗ್ರೆಸ್ ವಿರುದ್ಧ ಟ್ವೀಟ್ ವಾರ್ ಮುಂದುವರಿಸಿದ ರಾಜ್ಯ ಬಿಜೆಪಿ..!

ಬೆಂಗಳೂರು: ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿಯು ಟ್ವೀಟ್ ವಾರ್ ಮುಂದುವರಿಸಿದೆ. ಒಬ್ಬ ಅಮಾಯಕ ಹೆಣ್ಣು ಮಗಳನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಂಡು ರಾಜ್ಯದ “ಮಹಾ ನಾಯಕ” ಆಗಲು ಹೊರಟ “ಜೈಲು ಹಕ್ಕಿ” ಇಂದು “ಖಳನಾಯಕ” ಆಗಿರುವುದು ಕಾಂಗ್ರೆಸ್ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಬಿಜೆಪಿ ಟೀಕೆ ಮಾಡಿದೆ. ಸೆಕ್ಷನ್ ಸಿದ್ದರಾಮಯ್ಯನವರೇ ನಿಮ್ಮ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚನೆಯಾದರೆ ಒಂದೇ ಕಲ್ಲಿನಲ್ಲಿ ಎರಡು ಹಣ್ಣು ಕೆಡವಲು ಸಾಧ್ಯವಿದೆ.

ಒಂದು, ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುತ್ತದೆ. ಇನ್ನೊಂದು, ಡಿಕೆ ಶಿವಕಮಾರ್ ನಡೆಸಿದ ಷಡ್ಯಂತ್ರವನ್ನು ಸಾಬೀತುಪಡಿಸಬಹುದು. ಒಬ್ಬ ಪ್ರತಿಸ್ಪರ್ಧಿಯನ್ನು ಕೆಡವಿದ ಸಾಧನೆ ನಿಮ್ಮದಾಗಲಿದೆ. ಏನಂತೀರಿ ಎಂದು ಟೀಕಿಸಿದೆ.

ಸೆಕ್ಷನ್ ಸ್ಪೆಷಲಿಸ್ಟ್ ಸಿದ್ದರಾಮಯ್ಯನವರೇ ಸಂತ್ರಸ್ಥ ಯುವತಿಯ ಪೋಷಕರು ನೇರವಾಗಿ ನಿಮ್ಮ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮೇಲೆ ಬೊಟ್ಟು ಮಾಡಿ, ಸಂತ್ರಸ್ಥೆಯನ್ನು ಒತ್ತೆಯಾಗಿರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಿರುವಾಗ ಯುವತಿಗೆ ಅಪಾಯ ಎದುರಾದರೆ ಕಾನೂನಿನ ಪ್ರಕಾರ ಡಿಕೆಶಿ ಅವರು ಹೊಣೆ ಅಲ್ಲವೇ? ಎಂದು ಬಿಜೆಪಿ ಟ್ವೀಟ್ ಮಾಡಿದೆ.

 

error: Content is protected !!