ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರೆಯಲಿದ್ದು, ನಾಳೆ ಕೂಡಾ ಬಸ್‌ಗಳು ರಸ್ತೆಗಿಳಿಯುವುದಿಲ್ಲ: ಕೋಡಿಹಳ್ಳಿ ಚಂದ್ರಶೇಖರ್ - BC Suddi
ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರೆಯಲಿದ್ದು, ನಾಳೆ ಕೂಡಾ ಬಸ್‌ಗಳು ರಸ್ತೆಗಿಳಿಯುವುದಿಲ್ಲ: ಕೋಡಿಹಳ್ಳಿ ಚಂದ್ರಶೇಖರ್

ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರೆಯಲಿದ್ದು, ನಾಳೆ ಕೂಡಾ ಬಸ್‌ಗಳು ರಸ್ತೆಗಿಳಿಯುವುದಿಲ್ಲ: ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: “ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರೆಯಲಿದ್ದು, ನಾಳೆ ಕೂಡಾ ಬಸ್‌ಗಳು ರಸ್ತೆಗಿಳಿಯುವುದಿಲ್ಲ” ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿ‌ದ್ದಾರೆ.

ಬುಧವಾರ ನಗರದಲ್ಲಿ ಮಾತನಾಡಿದ ಅವರು, “ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ನಾವು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳು ಸಿದ್ದರಿದ್ದೇವೆ. ಕೊರೊನಾ ನೆಪ ಹೇಳಿ ಸರ್ಕಾರ ಕಡಿಮೆ ಸಂಬಳ ನೀಡುತ್ತಿದೆ. ಹಾಗಾದರೆ, ಸರ್ಕಾರ ಮಠ-ಮಂದಿರಗಳಿಗೆ ಎಲ್ಲಿಂದ ಹಣ ನೀಡುತ್ತಿದೆ” ಎಂದು ಕೇಳಿದ್ದಾರೆ.

“ತಾರತಮ್ಯ ನೀತಿಯನ್ನು ಸರ್ಕಾರ ಮೊದಲು ಬಿಡಬೇಕು. ಆರನೇ ವೇತನ ಆಯೋಗದಂತೆ ವೇತನ ನೀಡಬೇಕು ಎನ್ನುವುದು ನಮ್ಮ ಬೇಡಿಕೆ. ಎಸ್ಮಾ ಜಾರಿ ಮಾಡುವ ಅನಿವಾರ್ಯತೆ ಇಲ್ಲ” ಎಂದಿದ್ದಾರೆ.

ಮುಷ್ಕರವನ್ನು ಕೊನೆಗೊಳಿಸಿ ಮಾತುಕತೆಗೆ ಬರಬೇಕೆಂದು ಸಾರಿಗೆ ನೌಕರರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ

error: Content is protected !!