ಸಾರಿಗೆ ನೌಕರರು ನಡೆಸುತ್ತಿರುವ ರಾಜ್ಯವ್ಯಾಪಿ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ..! - BC Suddi
 ಸಾರಿಗೆ ನೌಕರರು ನಡೆಸುತ್ತಿರುವ ರಾಜ್ಯವ್ಯಾಪಿ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ..!

 ಸಾರಿಗೆ ನೌಕರರು ನಡೆಸುತ್ತಿರುವ ರಾಜ್ಯವ್ಯಾಪಿ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ..!

ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ರಾಜ್ಯವ್ಯಾಪಿ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಇದೇ ಮೊದಲ ಬಾರಿಗೆ ಐದು ದಿನಗಳವರಗೆ ಸಾರಿಗೆ ಮುಷ್ಕರ ಮುಂದುವರೆದಿದೆ. ಕಳೆದ ಡಿಸೆಂಬರ್ ನಲ್ಲಿಯೂ ಸಾರಿಗೆ ನೌಕರರು ಮುಷ್ಕರವನ್ನು ಮಾಡಿದ್ದು, ಅದು ನಾಲ್ಕು ದಿನಕ್ಕೆ ಅಂತ್ಯವಾಗಿತ್ತು.

ಮುಷ್ಕರ ಹಿನ್ನೆಲೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳ ದರ್ಬಾರ್ ಜೋರಾಗಿದೆ. ಕೆ ಎಸ್ ಆರ್ ಟಿ ಮತ್ತು ಬಿಎಂಟಿಸಿ ಎರಡೂ ಬಸ್ ನಿಲ್ದಾಣಗಳಲ್ಲಿ ಮುಂಜಾನೆಯಿಂದಲೇ ಖಾಸಗಿ ಬಸ್ಸುಗಳ ಓಡಾಟ ಆರಂಭವಾಗಿದೆ. ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗದಿರಲಿ ಎಂದು ರಾಜ್ಯ ಸರ್ಕಾರ ಎಲ್ಲಾ ಪ್ರಮುಖ ರೂಟ್ ಗಳಲ್ಲಿ ಖಾಸಗಿ ಬಸ್ ಗಳ ಓಡಾಟಕ್ಕೆ ಅನುಮತಿ ನೀಡಿದ್ದು ಮುಷ್ಕರ ಮುಗಿಯುವವರೆಗೂ ಖಾಸಗಿ ಬಸ್ ಗಳ ಸಂಚಾರ ಮುಂದುವರೆಯಲಿದೆ.

ಸರ್ಕಾರ ಎಷ್ಟೇ ಮನವೊಲಿಸುವ ಪ್ರಯತ್ನ ನಡೆಸಿದ್ರು ನೌಕರರು ಮಾತ್ರ ಆರನೇ ವೇತನ ಆಯೋಗ ಜಾರಿಯಾಗುವವರೆಗೆ ಮುಷ್ಕರ ಕೈಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಸರ್ಕಾರ ಕಾನೂನಿನ ಬಳಕೆ ಮಾಡಿ ನೌಕರರಿಗೆ ಸೆಡ್ಡು ಹೊಡೆಯಲು ವಿವಿಧ ತಂತ್ರಗಳನ್ನು ರೂಪಿಸಿದೆ.

ಬಿಜೆಪಿಯವರು ಎಲ್ಲಿಯಾದರೂ ಸೋಲುತ್ತೇವೆ ಎಂದು ಹೇಳಿದ್ದಾರಾ? : ಬಿಜೆಪಿ ಎಂದರೆ ಭ್ರಷ್ಟಾಚಾರ ಜನತಾ ಪಾರ್ಟಿ: ಸಿದ್ದರಾಮಯ್ಯ