ದೇಶದ ಒಟ್ಟು 13 ವಿಮಾನ ನಿಲ್ದಾಣಗಳ ಖಾಸಗೀಕರಣ ಮಾಡಲು ಯೋಜಿಸಿದ ಕೇಂದ್ರ ಸರ್ಕಾರ - BC Suddi
ದೇಶದ ಒಟ್ಟು 13 ವಿಮಾನ ನಿಲ್ದಾಣಗಳ ಖಾಸಗೀಕರಣ ಮಾಡಲು ಯೋಜಿಸಿದ ಕೇಂದ್ರ ಸರ್ಕಾರ

ದೇಶದ ಒಟ್ಟು 13 ವಿಮಾನ ನಿಲ್ದಾಣಗಳ ಖಾಸಗೀಕರಣ ಮಾಡಲು ಯೋಜಿಸಿದ ಕೇಂದ್ರ ಸರ್ಕಾರ

ನವದೆಹಲಿ : ಮುಂದಿನ ಆರ್ಥಿಕ ವರ್ಷದೊಳಗಾಗಿ ದೇಶದ ಒಟ್ಟು 13 ವಿಮಾನ ನಿಲ್ದಾಣಗಳ ಖಾಸಗೀಕರಣ ಮಾಡಲು ಯೋಜಿಸಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. 2.5 ಲಕ್ಷ ಕೋಟಿ ಆಸ್ತಿ ಹಣ ಗಳಿಸುವ ಭಾಗವಾಗಿ ದೇಶದ ಪ್ರಮುಖ ನಾಲ್ಕು ವಿಮಾನ ನಿಲ್ದಾಣಗಳಾದ ಬೆಂಗಳೂರು, ದೆಹಲಿ, ಮುಂಬೈ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಉಳಿದಿರುವ ತನ್ನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು, ದೆಹಲಿ, ಮುಂಬೈ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳನ್ನು ಈಗಾಗಲೇ ಖಾಸಗಿ ಕಂಪನಿಗಳು ನಿರ್ವಹಿಸುತ್ತಿದೆ. ತಮ್ಮ ಪೂರ್ಣ ಪ್ರಮಾಣದ ಷೇರನ್ನು ಕಂಪೆನಿಗಳಿಗೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.13 ಎಎಐ (Airports Authority of India )ವಿಮಾನ ನಿಲ್ದಾಣಗಳನ್ನು ಈಗಾಗಲೇ ಮುಂದಿನ ಆರ್ಥಿಕ ವರ್ಷ ಮುಗಿಯುವುದರೊಳಗಾಗಿ ಖಾಸಗೀಕರಣ ಮಾಡಲು ನಿರ್ಧರಿಸಿದೆ.

ಹೆಚ್ಚು ಆಕರ್ಷಕ ಪ್ಯಾಕೇಜ್ ಗಳನ್ನು ರಚಿಸಿ ಲಾಭದಾಯಕ ಹಾಗೂ ಲಾಭರಹಿತ ವಿಮಾನ ನಿಲ್ದಾಣಗಳನ್ನು ಒಟ್ಟುಗೂಡಿಸುವ ಸಾಧ್ಯತೆಗಳನ್ನು ನೋಡಲಾಗುತ್ತಿದೆ ಎಂಬ ಮಾಹಿತಿಯನ್ನು ಕೂಡ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಇನ್ನು,ನರೇಂದ್ರ ಮೋದಿಯವರ ಸರ್ಕಾರದ ಅಡಿಯಲ್ಲಿ ಮೊದಲ ಹಂತದ ವಿಮಾನ ನಿಲ್ದಾಣಗಳ ಖಾಸಗೀಕರಣದ ಸಂದರ್ಭದಲ್ಲಿ, ಅದಾನಿ ಗ್ರೂಪ್, ಲಕ್ನೋ, ಅಹಮದಾಬಾದ್, ಜೈಪುರ, ಮಂಗಳೂರು(ಬಜ್ಪೆ), ತಿರುವನಂತಪುರ, ಗುವಾಹಟಿಯ ವಿಮಾನ ನಿಲ್ದಾಣಗಳನ್ನು ಅದಾನಿ ಕಂಪೆನಿ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

 

error: Content is protected !!