ಬೆಂಗಳೂರು:  ನಾಳೆ 144 ಸೆಕ್ಷನ್ ಜಾರಿ ಮಾಡಿ ಆದೇಶ ನೀಡಿದ್ದಾರೆ: ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ - BC Suddi
ಬೆಂಗಳೂರು:  ನಾಳೆ 144 ಸೆಕ್ಷನ್ ಜಾರಿ ಮಾಡಿ ಆದೇಶ ನೀಡಿದ್ದಾರೆ: ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌

ಬೆಂಗಳೂರು:  ನಾಳೆ 144 ಸೆಕ್ಷನ್ ಜಾರಿ ಮಾಡಿ ಆದೇಶ ನೀಡಿದ್ದಾರೆ: ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌

ಬೆಂಗಳೂರು:  ‘ನಾಳೆ 144 ಸೆಕ್ಷನ್ ಜಾರಿ ಮಾಡಿ ಆದೇಶ ನೀಡಿದ್ದಾರೆ. ಹೀಗಾಗಿ ನಗರದಲ್ಲಿ ಎಲ್ಲಿಯೂ ಸಹ ಗುಂಪುಗೂಡುವಂತಿಲ್ಲ. ಯಾವುದೇ ರ್ಯಾಲಿ, ಧರಣಿ ಮಾಡುವಂತಿಲ್ಲ. ಯಾವುದೇ ಸಾರ್ವಜನಿಕ ಸಮಾರಂಭ, ಗ್ರೂಪ್ ಸೆಲೆಬ್ರೇಷನ್ ಮಾಡುವಂತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತರು, ನಾಳೆ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಿಲಾಗಿದೆ ಇನ್ನು ‘ ರಾಜ್ಯದಲ್ಲಿ 21ನೇ ತಾರೀಕಿನವರೆಗೆ ರಾಜ್ಯದಲ್ಲಿ ಕೋವಿಡ್‌ ಪ್ರೊಟೋಕಾಲ್‌ ಜಾರಿಯಲ್ಲಿರುತ್ತೆ. ಹಾಗಾಗಿ ಯಾರಿಗೂ ಪ್ರತಿಭಟನೆಗೆ ಅವಕಾಶವಿಲ್ಲ. ರೂಲ್ಸ್‌ ಬ್ರೇಕ್‌ ಮಾಡಿ ರಸ್ತೆಗಿಳಿದ್ರೆ, ಅಂತಹವರನ್ನ ಅರೆಸ್ಟ್‌ ಮಾಡ್ತೀವಿ ಜಡ್ಜ್‌ ಮುಂದೆ ನಿಲ್ಲಿಸಿ, ಜೈಲಿಗೆ ಕಳಿಸ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಪ್ರತಿ ಬಾರಿಯಂತೆ ಪ್ರತಿಭಟನಾಕಾರರನ್ನ ಬಂಧಿಸಿ ಮುಂದೆ ಹೋಗಿ ಬಿಡಲ್ಲ ಎಂದು ಸ್ಪಷ್ಟ ಪಡಿಸಿದ ಅವ್ರು, ಪ್ರತಿಭಟನೆ ಮಾಡಿದ್ರೆ, ಬಸ್‌, ಜನರ ಮೇಲೆ ಕಲ್ಲು ತೂರಾಟ ನಡೆಸಿದ್ರೆ ನಾವು ಸುಮ್ಮನಿರಲ್ಲ. ರೆಗ್ಯೂಲರ್‌ ಐಪಿಸಿ ಸೆಕ್ಷನ್‌ ಪ್ರಕಾರ ಅರೆಸ್ಟ್‌ ಮಾಡ್ತೇವೆ. ಇನ್ನು ಇದುವರೆಗೂ ನಮ್ಮ ಬಳಿ ಯಾರು ಅನುಮತಿ ಕೇಳಿಲ್ಲ. ಕೇಳಿದ್ರು ಪ್ರೊಟೋಕಾಲ್‌ ಜಾರಿಯಲ್ಲಿರೋದ್ರಿಂದ ನಾವು ಅನುಮತಿ ಕೊಡುವುದಿಲ್ಲ. ಹಾಗಾಗಿ ನಾಳೆ ಸೂಕ್ತ ಬಂದೋಬಸ್ತ್‌ ಮಾಡ್ತೇವೆ’ ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಹೊಸ ಮನೆಗೆ ಎಂಟ್ರಿಕೊಟ್ಟ ರಾಯಲ್ ಮಮ್ಮಿಗಳು

error: Content is protected !!