ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಗೆ ಕ್ಲಾಸ್ ತೆಗೆದುಕೊಂಡ ಮೇಜರ್ ಜನರಲ್ ಡಾ. ಯಶ್ ಮೋರ್ - BC Suddi
ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಗೆ  ಕ್ಲಾಸ್ ತೆಗೆದುಕೊಂಡ ಮೇಜರ್ ಜನರಲ್ ಡಾ. ಯಶ್ ಮೋರ್

ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಗೆ ಕ್ಲಾಸ್ ತೆಗೆದುಕೊಂಡ ಮೇಜರ್ ಜನರಲ್ ಡಾ. ಯಶ್ ಮೋರ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರಿಗೆ ಮೇಜರ್ ಜನರಲ್ ಡಾ. ಯಶ್ ಮೋರ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮೊದಲು ಟ್ವೀಟ್ ಮಾಡಿದ್ದ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್, ಆಕ್ಸಿಜನ್ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳ ಮೇಲಿನ ಕಸ್ಟಮ್ ಡ್ಯೂಟಿ ಮತ್ತು ಸೆಸ್ ತೆಗೆದು ಹಾಕಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ. ಕೊರೊನಾ ಲಸಿಕೆಗಳು ಸಹ ಕಸ್ಟಮ್ ಡ್ಯೂಟಿಯಿಂದ ಮುಕ್ತವಾಗಿವೆ. ಇದು ಕಡಿಮೆ ದರದಲ್ಲಿ ಎಲ್ಲ ಕಡೆ ಸಿಗುವಂತೆ ಆಗಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಮೇಜರ್ ಜನರಲ್ ಡಾ. ಯಶ್ ಮೋರ್, “ಇದು ಅವರ ಕರ್ತವ್ಯ ಮಿಸ್ಟರ್ ಮಿನಿಸ್ಟರ್. ಎಲ್ಲ ಸಂಸ್ಥೆಗಳು ಈ ರೀತಿ ಹೊಗಳುವುದು, ಪೂಜೆ ಮಾಡುವುದನ್ನು ಆರಂಭಿಸಿದರೆ ಇದಕ್ಕೊಂದು ಅಂತ್ಯ ಇದೆಯೇ? ಪ್ರಚಾರವನ್ನು ಬದಿಗಿಟ್ಟು ಕೆಲಸದಲ್ಲಿ ತೊಡಗಿಕೊಳ್ಳಿ. ಈ ರೀತಿ ವ್ಯಕ್ತಿ ಹೊಗಳಿಕೆ ನೆಗೆಟಿವ್ ಪರಿಣಾಮ ಉಂಟು ಮಾಡಬಲ್ಲದು. ದೇಶವೇ ವಿಪತ್ತು ಎದುರಿಸುತ್ತಿರುವಾಗ ಇದೆಲ್ಲ ಬೇಡ. ದಯವಿಟ್ಟು ನನ್ನ ಸಲಹೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿ” ಎಂದು ಕುಟುಕಿದ್ದಾರೆ.