ಹೊಸ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ನಿರಾಕರಣೆ: ಬೇರೆಡೆ ಹೋಗಿ ಇಲ್ಲ, ನಾಳೆ ಒಂಬತ್ತು ಗಂಟೆಯ ನಂತರ ಬನ್ನಿ ಎಂದ ಚಿತಾಗಾರದ ಸಿಬ್ಬಂದಿ - BC Suddi
ಹೊಸ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ನಿರಾಕರಣೆ: ಬೇರೆಡೆ ಹೋಗಿ ಇಲ್ಲ, ನಾಳೆ ಒಂಬತ್ತು ಗಂಟೆಯ ನಂತರ ಬನ್ನಿ ಎಂದ ಚಿತಾಗಾರದ ಸಿಬ್ಬಂದಿ

ಹೊಸ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ನಿರಾಕರಣೆ: ಬೇರೆಡೆ ಹೋಗಿ ಇಲ್ಲ, ನಾಳೆ ಒಂಬತ್ತು ಗಂಟೆಯ ನಂತರ ಬನ್ನಿ ಎಂದ ಚಿತಾಗಾರದ ಸಿಬ್ಬಂದಿ

ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ ಪೀಣ್ಯ ಹಾಗೂ ಸುಮ್ಮನಹಳ್ಳಿ ಚಿತಾಗಾರದಲ್ಲಿ ಸದ್ಯಕ್ಕೆ ಹೊಸ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ನಿರಾಕರಣೆ ಮಾಡಲಾಗಿದೆ. “ಬೇರೆಡೆ ಹೋಗಿ ಇಲ್ಲ, ನಾಳೆ ಒಂಬತ್ತು ಗಂಟೆಯ ನಂತರ ಬನ್ನಿ” ಎಂದು ಚಿತಾಗಾರದ ಸಿಬ್ಬಂದಿ ತಿಳಿಸಿದ್ದಾರೆ.

ಬೆಳಗ್ಗೆ 9ಗಂಟೆಯಿಂದ ಅಂತ್ಯಸಂಸ್ಕಾರವನ್ನ ಸಿಬ್ಬಂದಿ ನಡೆಸುತ್ತ ಬಂದಿದ್ದಾರೆ. ಒಂದು ಮೃತ ದೇಹದ ಅಂತ್ಯ ಸಂಸ್ಕಾರಕ್ಕೆ ಕನಿಷ್ಠ ಒಂದು ಗಂಟೆ ತೆಗೆದುಕೊಳ್ಳಲಿದೆ ಎನ್ನಲಾಗಿದೆ. ಹೀಗಾಗಿ 25 ಮೃತದೇಹಗಳು ಆಗುತ್ತಿದ್ದಂತೆ ಸುಮ್ಮನಹಳ್ಳಿ ಹಾಗೂ ಪೀಣ್ಯಾದ ಚಿತಾಗಾರ ಸಿಬ್ಬಂದಿ ಮೈನ್​ಗೇಟ್ ಕ್ಲೋಸ್ ಮಾಡಿದ್ದಾರೆ. ಅಂದ ಹಾಗೆ ಸುಮ್ಮನಹಳ್ಳಿ ಚಿತಾಗಾರದಲ್ಲಿ ಇಂದು 16 ಕೋವಿಡ್ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲಾಗಿದೆ. ಇನ್ನೂ 9 ಮೃತ ದೇಹಗಳು ಅಂತ್ಯ ಸಂಸ್ಕಾರಕ್ಕೆ ಬಾಕಿ ಇವೆ ಎಂದು ವರದಿಯಾಗಿದೆ.

ಇತ್ತ ಪೀಣ್ಯಾ ಚಿತಾಗಾರದಲ್ಲಿ ಬೆಳಗ್ಗಿನಿಂದ 14 ಮೃತ ದೇಹದ ಅಂತ್ಯ ಸಂಸ್ಕಾರ ಮಾಡಲಾಗಿದೆ. ಪೀಣ್ಯ ಚಿತಾಗಾರ ಬಳಿ ಅಂತ್ಯಸಂಸ್ಕಾರದ ಸಾಲಿನಲ್ಲಿ ಇನ್ನೂ ಮೃತದೇಹಗಳಿವೆ. ಸರತಿ ಸಾಲಿನಲ್ಲಿ ಆ್ಯಂಬುಲೆನ್ಸ್​ಗಳನ್ನ ನಿಲ್ಲಿಸಿಕೊಂಡು ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಕಾಯುತ್ತಿದ್ದಾರೆ. ಬೆಳಗಿನ ಜಾವದವರೆಗೂ ಅಂತ್ಯಸಂಸ್ಕಾರ ನಡೆಸಲು ಚಿತಾಗಾರ ಸಿಬ್ಬಂದಿ ನಿರ್ಧರಿಸಿದ್ದಾರೆ. ಹೀಗಾಗಿ ದಿನಕ್ಕೆ ಕೇವಲ ಐದು ತಾಸುಗಳ ಕಾಲ ಮಾತ್ರ ಚಿತಾಗಾರಕ್ಕೆ ಬ್ರೇಕ್ ಹಾಕಲಿದ್ದಾರೆ.

ಅಲಹಾಬಾದ್: 5 ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಲು ಅಲಹಾಬಾದ್ ಹೈಕೋರ್ಟ್ ಆದೇಶ: ಜಾರಿ ಮಾಡಲಾಗದು ಎಂದ ಯೋಗಿ ಸರ್ಕಾರ