ಕೊರೊನಾ ವೈರಸ್ : ಮಹತ್ವದ ವಿಚಾರ ಚರ್ಚಿಸಲು ಕೇಂದ್ರ ಕ್ಯಾಬಿನೆಟ್ ಸಭೆ ಕರೆದ ಪ್ರಧಾನಿ ಮೋದಿ - BC Suddi
ಕೊರೊನಾ ವೈರಸ್ : ಮಹತ್ವದ ವಿಚಾರ ಚರ್ಚಿಸಲು ಕೇಂದ್ರ ಕ್ಯಾಬಿನೆಟ್ ಸಭೆ ಕರೆದ ಪ್ರಧಾನಿ ಮೋದಿ

ಕೊರೊನಾ ವೈರಸ್ : ಮಹತ್ವದ ವಿಚಾರ ಚರ್ಚಿಸಲು ಕೇಂದ್ರ ಕ್ಯಾಬಿನೆಟ್ ಸಭೆ ಕರೆದ ಪ್ರಧಾನಿ ಮೋದಿ

ನವದೆಹಲಿ: ದೇಶದಲ್ಲಿ ಹೆಮ್ಮಾರಿ ಕೊರೊನಾ ಅಟ್ಟಹಾಸ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಹತ್ವದ ವಿಚಾರ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಏ.30ರಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಮಂತ್ರಿ ಮಂಡಲ ಸಭೆ ಕರೆದಿದ್ದಾರೆ.

ವರ್ಚುವಲ್ ಮೀಟಿಂಗ್ ಮಾಡಲಿರುವ ಪ್ರಧಾನಿ ಮೋದಿ, ಕೋವಿಡ್ 2ನೇ ಅಲೆ ವಕ್ಕರಿಸಿದ ಬಳಿಕ ಕರೆದ ಮೊದಲ ಮಂತ್ರಿಮಂಡಲ ಸಭೆ ಇದಾಗಿದೆ. ದೇಶದಲ್ಲಿ ಕೊರೊನಾ ವೈರಸ್ ಸ್ಥಿತಿಗತಿಗಳ ಕುರಿತ ಪರಿಶೀಲನೆ ನಡೆಸಲಿದ್ದಾರೆ. ಜೊತೆಗೆ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯದಲ್ಲಿ ಗುರುವಾರ 35,024 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ