ಕೊರೊನಾ ಸೋಂಕಿ ಗೆ ಮಾಜಿ ಸಂಸದೆ ಕರುಣಾ ಶುಕ್ಲಾ ವಿಧಿವಶ - BC Suddi
ಕೊರೊನಾ ಸೋಂಕಿ ಗೆ ಮಾಜಿ ಸಂಸದೆ ಕರುಣಾ ಶುಕ್ಲಾ ವಿಧಿವಶ

ಕೊರೊನಾ ಸೋಂಕಿ ಗೆ ಮಾಜಿ ಸಂಸದೆ ಕರುಣಾ ಶುಕ್ಲಾ ವಿಧಿವಶ

ರಾಯ್ಪುರ: ಡೆಡ್ಲಿ ಸೋಂಕಿನ ಶವಯಾತ್ರೆ ಮುಂದುವರೆದಿದೆ. ಸದ್ಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಬಂಧಿ, ಮಾಜಿ ಸಂಸದೆ, ಕಾಂಗ್ರೆಸ್ ಹಿರಿಯ ನಾಯಕಿ ಕರುಣಾ ಶುಕ್ಲಾ ಮಹಾಮಾರಿ ಸೋಂಕಿನಿಂದ ಗೆ ಸಾವನಪ್ಪಿದ್ದಾರೆ. ಕರುಣಾ ಶುಕ್ಲಾ ಅವರಿಗೆ ಇತ್ತೀಚಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.

ರಾಯ್ಪುರದ ರಾಮಕೃಷ್ಣ ಕೇರ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೆ ಇಂದು (ಮಂಗಳವಾರ ) ಬೆಳಗಿನ ಇಹಲೋಕ ತೇಜಿಸಿದ್ದಾರೆ. 2 ಬಾರಿ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಶುಕ್ಲಾ, ಮೂರು ದಶಕ ಕಾಲ ಬಿಜೆಪಿಯಲ್ಲಿ ಸಕ್ರಿಯವಾಗಿದ್ದರು. 2013ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಆಕ್ಸಿಜನ್ ಇಲ್ಲಾ ಎನ್ನುವುದು ಒಂದುಕಡೆಯಾದ್ರೆ ಇದ್ದ ಆಕ್ಸಿಜನ್ ಬಳಸದೆ 4 ಜನರ ಸಾವಿಗೆ ಕಾರಣರಾದ ಜಿಲ್ಲಾಸ್ಪತ್ರೆ ಅಧಿಕಾರಿ ಅಮಾನತು!