ತಿರುಪತಿಗೆ ಮುಡಿ ಕೊಟ್ಟು ಕೆಲಸ ಕಳೆದುಕೊಂಡ ಊಬರ್​​​ ಚಾಲಕ! - BC Suddi
ತಿರುಪತಿಗೆ ಮುಡಿ ಕೊಟ್ಟು ಕೆಲಸ ಕಳೆದುಕೊಂಡ ಊಬರ್​​​ ಚಾಲಕ!

ತಿರುಪತಿಗೆ ಮುಡಿ ಕೊಟ್ಟು ಕೆಲಸ ಕಳೆದುಕೊಂಡ ಊಬರ್​​​ ಚಾಲಕ!

ಹೈದರಾಬಾದ್: ಊಬರ್​ ಕ್ಯಾಬ್​​ ಚಾಲಕನೊಬ್ಬ ತಿರುಪತಿಗೆ ಹೋಗಿ ಮುಡಿಕೊಟ್ಟ ಕೊಟ್ಟ ಕಾರಣಕ್ಕೆ ಕೆಲಸ ಕಳೆದುಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಊಬರ್​​ ಚಾಲಕ ಶ್ರೀಕಾಂತ್​​ ಎಂಬವರು ತಿರುಪತಿಗೆ ಹೋಗಿ ಮುಡಿ ಕೊಟ್ಟಿದ್ದು, ಅಲ್ಲಿಂದ ಬಂದು ಕೆಲಸಕ್ಕೆ ಮರಳಿದ ವೇಳೆಯಲ್ಲಿ ಉಬರ್‌ ನಿಯಮದಂತೆ ಸೆಲ್ಫಿ ತೆಗೆದು ಲಾಗ್‌ ಇನ್‌ ಆಗಲು ಯತ್ನಿಸಿದ್ದಾರೆ, ಆದರೆ ನಾಲ್ಕು ವಿಫಲ ಯತ್ನಗಳ ಬಳಿಕ ಅವರ ಖಾತೆ ರದ್ದಾಗಿದೆ ಎನ್ನಲಾಗಿದೆ.

ಒಂದು ವರ್ಷದಿಂದ ಊಬರ್​ನಲ್ಲಿ ಶ್ರೀಕಾಂತ್​​ ಕೆಲಸ ಮಾಡುತ್ತಿದ್ದು, 1428 ಟ್ರಿಪ್​ಗಳೊಂದಿಗೆ 4.67 ರೇಟಿಂಗ್​ ಪಡೆದಿದ್ದು, ಉಬರ್‌ ಚಾಲನ ಕೆಲಸದಲ್ಲಿ ಒಳ್ಳೆಯ ಹೆಸರನ್ನು ಕೂಡ ಗಳಿಸಿದ್ದರು ಎನ್ನಲಾಗಿದೆ.

“ಈಗ ನನ್ನ ಖಾತೆಯನ್ನು ನಿರ್ಬಂಧಿಸಲಾಗಿದ್ದು, ಆಗಿರುವ ಸಮಸ್ಯೆಯನ್ನು ಬಗೆ ಹರಿಸುವಂತೆ ಉಬರ್‌ನ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ಆದರೆ ಅವರು ಈ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ ಹೇಳಿದ್ದಾರೆ, ಚಾಲನ ವೃತ್ತಿಯಿಂದಲೇ ನಮ್ಮ ಕುಟುಂಬ ನಡೆಯುತ್ತಿದ್ದು, ಈಗ ನನ್ನ ಸಂಸಾರ ತೊಂದರೆ ಅನುಭವಿಸುತ್ತಿದೆ” ಎಂದು ಹೇಳಿದ್ದಾರೆ.

error: Content is protected !!