ಗುರುವಾರ ಬೆಳಗ್ಗೆ ರಷ್ಯಾದಿಂದ ಆಮ್ಲಜನಕ, ವೆಂಟಿಲೇಟರ್‌‌ ಹೊತ್ತು ಭಾರತಕ್ಕೆ ಬಂದಿಳಿದ ವಿಮಾನ - BC Suddi
ಗುರುವಾರ ಬೆಳಗ್ಗೆ ರಷ್ಯಾದಿಂದ ಆಮ್ಲಜನಕ, ವೆಂಟಿಲೇಟರ್‌‌ ಹೊತ್ತು ಭಾರತಕ್ಕೆ ಬಂದಿಳಿದ ವಿಮಾನ

ಗುರುವಾರ ಬೆಳಗ್ಗೆ ರಷ್ಯಾದಿಂದ ಆಮ್ಲಜನಕ, ವೆಂಟಿಲೇಟರ್‌‌ ಹೊತ್ತು ಭಾರತಕ್ಕೆ ಬಂದಿಳಿದ ವಿಮಾನ

ನವದೆಹಲಿ: “ಕೊರೊನಾ ವಿರುದ್ದ ಹೋರಾಟದಲ್ಲಿ ಎಲ್ಲರೂ ಕೂಡಾ ಹೋರಾಡಬೇಕಾಗಿರುವುದು ಮುಖ್ಯ” ಎಂದು ಭಾರತದ ರಷ್ಯಾ ರಾಯಭಾರಿ ನಿಕೋಲಾಯ್‌‌ ಕುಡಶೇವ್‌‌ ತಿಳಿಸಿದ್ದಾರೆ.

“ಎರಡು ದೇಶಗಳ ನಡುವಿನ ವಿಶೇಷ ಹಾಗೂ ಸವಲತ್ತು ಪಡೆದ ಕಾರ್ಯತಂತ್ರದ ಸಹಭಾಗಿತ್ವ ಹಾಗೂ ಕೊರೊನಾ ವಿರುದ್ದದ ಹೋರಾಟದ ಹಿನ್ನೆಲೆ ರಷ್ಯಾದ ಒಕ್ಕೂಟವು ಭಾರತಕ್ಕೆ ನೆರವಿನ ಹಸ್ತನೀಡಲು ತೀರ್ಮಾನಿಸಿದೆ” ಎಂದು ಹೇಳಿದ್ದಾರೆ.

“ಈ ಉದ್ದೇಶಕ್ಕಾಗಿ, ಇಂದು ರಷ್ಯಾಸ ಎಮ್‌‌ಕಾರ್ಮ್‌ ನಿರ್ವಹಿಸುತ್ತಿರುವ ಎರಡು ತುರ್ತು ವಿಮಾನಗಳು ಭಾರತಕ್ಕೆ ಬಂದಿವೆ. ಇವುಗಳಲ್ಲಿ ಆಕ್ಸಿಜನ್‌‌‌‌‌ ಸಿಲಿಂಡರ್‌ಗಳು, ವೆಂಟೆಲೇಟರ್‌‌‌‌‌‌‌ಗಳು ಹಾಗೂ ಔಷಧಿಗಳು ಇವೆ” ಎಂದಿದ್ದಾರೆ.

“ಗುರುವಾರ ಬೆಳಗ್ಗೆ ರಷ್ಯಾದಿಂದ 20 ಆಮ್ಲಜನಕ ಸಿಲಿಂಡರ್‌‌ಗಳು, 75 ವೆಂಟಿಲೇಟರ್‌‌ಗಳು ಸೇರಿದಂತೆ 150 ಹಾಸಿಗೆಗಳು, 22 ಮೆಟ್ರಿಕ್‌‌ ಟನ್‌‌ ಔಷಧಿಗಳನ್ನು ತರಲಾಗಿದೆ” ಎಂದು ತೆರಿಗೆ ಮಂಡಳಿ ಮಾಹಿತಿ ನೀಡಿದೆ.

ಕೊರೊನಾ ಸೋಂಕು: ಅಧಿಕಾರಿಗಳಿಗೆ ತಲೆನೋವಾದ ಸೋಂಕಿತರು : ಬೆಂಗಳೂರಲ್ಲಿ 3 ಸಾವಿರ ಸೋಂಕಿತರು ನಾಪತ್ತೆ