ರಾಜ್ಯದಲ್ಲಿ ಗುರುವಾರ 35,024 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ - BC Suddi
ರಾಜ್ಯದಲ್ಲಿ ಗುರುವಾರ 35,024 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

ರಾಜ್ಯದಲ್ಲಿ ಗುರುವಾರ 35,024 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತೀವ್ರ ಸ್ವರೂಪದಲ್ಲಿ ಹೆಚ್ಚಳವಾಗುತ್ತಿದೆ. ಗುರುವಾರದಂದು ದಾಖಲೆಯ 270 ಮಂದಿ ಸೋಂಕಿಗೆ ಬಲಿಯಾದ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಆ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 15,306ಕ್ಕೆ ತಲುಪಿದೆ.

ಬುಧವಾರದ ರಿಪೋರ್ಟ್ ಪ್ರಕಟಗೊಂಡ ಬಳಿಕ ಗುರುವಾರ ಇಂದಿನ ಕೋವಿಡ್ ರಿಪೋರ್ಟ್ ಪ್ರಕಟಗೊಳ್ಳುವ ತನಕ 35,024 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಮಾಹಿತಿ ನೀಡಿದೆ. ರಾಜ್ಯದಲ್ಲಿ ಇಂದು 14,142 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಇದರೊಂದಿಗೆ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 11,10,025ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 19,637 ಮಂದಿಗೆ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 7,29,984ಕ್ಕೆ ತಲುಪಿದೆ.

3000ಕ್ಕೂ ಅಧಿಕ ಕೊರೊನಾ ಸೋಂಕಿತರು ನಾಪತ್ತೆ