ಐದು ರಾಜ್ಯಗಳ ಪೈಕಿ ಮೂರು ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ:  ಕಾಂಗ್ರೆಸ್‌ ಒಂದು ಗೆದ್ದು ತೋರಿಸಲಿ : ನಳಿನ್‌ ಸವಾಲು - BC Suddi
ಐದು ರಾಜ್ಯಗಳ ಪೈಕಿ ಮೂರು ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ:  ಕಾಂಗ್ರೆಸ್‌ ಒಂದು ಗೆದ್ದು ತೋರಿಸಲಿ : ನಳಿನ್‌ ಸವಾಲು

ಐದು ರಾಜ್ಯಗಳ ಪೈಕಿ ಮೂರು ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ:  ಕಾಂಗ್ರೆಸ್‌ ಒಂದು ಗೆದ್ದು ತೋರಿಸಲಿ : ನಳಿನ್‌ ಸವಾಲು

ಗೋಕಾಕ : ”ಐದು ರಾಜ್ಯಗಳಲ್ಲಿ ನಡೆಯುವ ಚುನಾವಣೆಯಲ್ಲಿ ನಾವು ಮೂರು ರಾಜ್ಯದಲ್ಲಿ ಗೆಲುವು ಸಾಧಿಸುತ್ತೇವೆ. ಆದರೆ ಕಾಂಗ್ರೆಸ್‌ ಒಂದು ರಾಜ್ಯವಾದರೂ ಗೆದ್ದು ತೋರಿಸಲಿ” ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣ್‌ದೀಪ್‌ ಸಿಂಗ್‌ ಸುರ್ಜೇವಾಲಾ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಸವಾಲೆಸೆದಿದ್ದಾರೆ.

ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರವಾಗಿ ಪಟ್ಟಣದಲ್ಲಿ ಭಾನುವಾರ ರೋಡ್‌ ಶೋ ನಡೆಸಿ ಮಾತನಾಡಿದ ಸಂದರ್ಭ ನಳಿನ್‌ ಕುಮಾರ್‌ ಕಟೀಲ್‌ ಅವರು, ಉಪಚುನಾವಣೆಯ ಫಲಿತಾಂಶವು ಬಿಜೆಪಿ ಪತನಕ್ಕೆ ಮುನ್ನುಡಿಯಾಗುತ್ತೆ ಎಂಬ ರಣ್‌ದೀಪ್‌ ಸಿಂಗ್‌ ಸುರ್ಜೇವಾಲಾ ಅವರ ಹೇಳಿಗೆ ತಿರುಗೇಟು ನೀಡಿದರು.

”ಐದು ರಾಜ್ಯಗಳ ಪೈಕಿ ಬಿಜೆಪಿ ಮೂರು ರಾಜ್ಯದಲ್ಲಿ ಗೆಲುವು ಸಾಧಿಸಲಿದೆ. ಈ ಪೈಕಿ ಎರಡು ರಾಜ್ಯಗಳಲ್ಲಿ ಹೊಸದಾಗಿ ಖಾತೆ ತೆರೆಯಲಿದೆ. ನಾಶ ಯಾರು ಆಗ್ತಾರೆ ಗೊತ್ತಾಗುತ್ತೆ. ಕಾಂಗ್ರೆಸ್‌ ಒಂದು ರಾಜ್ಯವಾದರೂ ಗೆದ್ದು ತೋರಿಸಲಿ” ಎಂದು ಲೇವಡಿ ಮಾಡಿದರು.

”ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಬಣಗಳು ಕಾಂಗ್ರೆಸ್‌ನಲ್ಲಿದ್ದು ಈ ಎರಡು ಬಣಗಳು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಜಗಳವಾಡಿ ತಮ್ಮ ಪಕ್ಷವನ್ನೇ ಅಧೋಗತಿಗೆ ತಂದಿದ್ದಾರೆ. ಕಾಂಗ್ರೆಸ್‌ ಪಕ್ಷ ಈಗ ಮೂರು ಭಾಗವಾಗಿದೆ” ಎಂದೂ ಹೇಳಿದರು.

”ಕಾಂಗ್ರೆಸ್‌ ಪಕ್ಷವೇ ಪ್ರಜಾಪ್ರಭುತ್ವ ಎಂಬ ಶಬ್ದಕ್ಕೆ ಹಾನಿ ಮಾಡಿದೆ” ಎಂದ ಅವರು, ”ಪಕ್ಷದಲ್ಲಿ ಪ್ರಭಾವಿಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರನ್ನು ತಮ್ಮ ರಾಜಕೀಯ ಬೇಳೆ ಬೆಯ್ಯಿಸಿಕೊಳ್ಳಲು ಡಿಕೆಶಿ ಚುನಾವಣಾ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಇನ್ನು ಸತೀಶ ಅವರ ರಾಜಕೀಯ ಜೀವನ ಕೊನೆಗೊಳಿಸಲು ಡಿಕೆಶಿ ನಡೆಸಿದ ಷಡ್ಯಂತ್ರ ಇದು” ಎಂದು ದೂರಿದರು.

ಇನ್ನು ಇದೇ ವೇಳೆ ಬಿಜೆಪಿ ಸರ್ಕಾರ ಸರ್ಕಸ್‌ ಸರ್ಕಾರ ಎಂಬ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣ್‌ದೀಪ್‌ ಸಿಂಗ್‌ ಸುರ್ಜೇವಾಲಾ ಅವರ ಹೇಳಿಕೆ ವಿರುದ್ದ ಹೌಹಾರಿದರು. ”ಸರ್ಕಸ್‌ ಕಂಪನಿ ಕಾಂಗ್ರೆಸ್‌ನವರದ್ದೆ ಇದೆ. ಅದರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಮಾಜಿ ಉಪಮುಖ್ಯಮಂತ್ರಿ ಡಾ.ಪರಮೇಶ್ವರ್‌ ಇದ್ದಾರೆ. ಈ ಸರ್ಕಸ್‌ ಕಂಪನಿಯನ್ನು ಸರಿಮಾಡಲೆಂದು ಸುರ್ಜೇವಾಲರನ್ನು ಕಳುಹಿಸಿಕೊಡಲಾಗಿದೆ” ಎಂದು ಟಾಂಗ್‌ ನೀಡಿದರು.

ಮೊದಲಿನಿಂದಲೂ ಸುಳ್ಳು ಹೇಳಿಕೊಂಡೇ ರಾಜಕಾರಣ ಮಾಡಿರುವ ಸಿಎಂ ಯಡಿಯೂರಪ್ಪ ಇದರ ಪ್ರತಿಫಲ ಉಣ್ಣಲಿದ್ದಾರೆ: ಸಿದ್ದರಾಮಯ್ಯ