ಕರ್ನಾಟಕದ ಸಾವಿರಾರು ಕೋಟಿ ರೂ.ಗಳನ್ನು ವಿಜಯೇಂದ್ರ ಲೂಟಿ ಮಾಡಿದ್ದಾರೆ: ಯತ್ನಾಳ್ - BC Suddi
ಕರ್ನಾಟಕದ ಸಾವಿರಾರು ಕೋಟಿ ರೂ.ಗಳನ್ನು ವಿಜಯೇಂದ್ರ ಲೂಟಿ ಮಾಡಿದ್ದಾರೆ: ಯತ್ನಾಳ್

ಕರ್ನಾಟಕದ ಸಾವಿರಾರು ಕೋಟಿ ರೂ.ಗಳನ್ನು ವಿಜಯೇಂದ್ರ ಲೂಟಿ ಮಾಡಿದ್ದಾರೆ: ಯತ್ನಾಳ್

ಹಾವೇರಿ: ಸಿಎಂ ಯಡಿಯೂರಪ್ಪ ಅವರಲ್ಲಿ ಪುತ್ರ ವ್ಯಾಮೋಹ ತುಂಬಿ ತುಳುಕುತ್ತಿದೆ. ಅದಕ್ಕಾಗಿಯೇ ಉಪಚುನಾವಣೆ ಅಖಾಡದಲ್ಲಿ ಮಗನನ್ನು ಬಿಟ್ಟಿದ್ದಾರೆ. ಅವರ ಪುತ್ರನ ಬಳಿ ಹಣ ಇದೆ. ಅದನ್ನು ಉಪಚುನಾವಣಾ ಕ್ಷೇತ್ರಗಳಲ್ಲಿ ಹಂಚುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಬಳಿ ಸಾವಿರಾರು ಕೋಟಿ ರೂ. ಇದೆ. ಕರ್ನಾಟಕದ ಸಾವಿರಾರು ಕೋಟಿ ರೂ.ಗಳನ್ನು ಅವರು ಲೂಟಿ ಮಾಡಿದ್ದಾರೆ. ಸದ್ಯದಲ್ಲೇ ಫೆಡರಲ್ ಬ್ಯಾಂಕ್ ಹಗರಣ ಹೊರಗೆ ಬರುತ್ತದೆ. ವಿಜಯೇಂದ್ರ ವಿದೇಶದಲ್ಲಿ ಸಾವಿರಾರು ಕೋಟಿ ರೂ. ಇಟ್ಟಿದ್ದಾರೆ. ಯಡಿಯೂರಪ್ಪನವರು ಬಿಜೆಪಿ ಕಟ್ಟುವಾಗ ಹಣ ಹಂಚುವ ಪರಿಸ್ಥಿತಿ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸುಪ್ರೀಂ ಕೋರ್ಟ್‌‌‌ನ ಶೇ.50ರಷ್ಟು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢ