ಶಿವಮೊಗ್ಗ : 'ಈ ಸಲ ಕಪ್ ನಮ್ದೇ' ಎಂದು ಹೊಟೇಲ್ ಬಿಲ್ ನಲ್ಲಿ ಪ್ರಿಂಟ್ ಹಾಕಿಸಿದ ಹೋಟೆಲ್ ಮಾಲೀಕ - BC Suddi
ಶಿವಮೊಗ್ಗ : ‘ಈ ಸಲ ಕಪ್ ನಮ್ದೇ’ ಎಂದು ಹೊಟೇಲ್ ಬಿಲ್ ನಲ್ಲಿ ಪ್ರಿಂಟ್ ಹಾಕಿಸಿದ ಹೋಟೆಲ್ ಮಾಲೀಕ

ಶಿವಮೊಗ್ಗ : ‘ಈ ಸಲ ಕಪ್ ನಮ್ದೇ’ ಎಂದು ಹೊಟೇಲ್ ಬಿಲ್ ನಲ್ಲಿ ಪ್ರಿಂಟ್ ಹಾಕಿಸಿದ ಹೋಟೆಲ್ ಮಾಲೀಕ

ಶಿವಮೊಗ್ಗ: ಶುಕ್ರವಾರದಿಂದ ಐಪಿಎಲ್ ಮೇನಿಯಾ ಶುರುವಾಗಿದೆ. ಕ್ರಿಕೆಟ್ ಆಸಕ್ತ ಯುವಜನರು ಸದ್ಯ ಅದರತ್ತಲೇ ಚಿತ್ತ ನೆಟ್ಟಿದ್ದಾರೆ. ಈ ವೇಳೆ ಏನೇನೋ ಆಸಕ್ತಿಕರ ವಿಷಯಗಳು ನಡೆಯುತ್ತಲೇ ಇರುತ್ತವೆ. ತಾವು ಯಾವ ತಂಡ ಪಾಲೋ ಮಾಡುತ್ತಾರೋ ಆ ತಂಡದ ಪರವಾಗಿ ಯುವಜನರು ಪೂಜೆ, ಹರಕೆ, ಚಾಲೆಂಜ್, ಹೀಗೆ ಇನ್ನೂ ಏನೇನೋ ಮಾಡುತ್ತಿರುತ್ತಾರೆ.

ಆದ್ರೆ ಇಲ್ಲೊಬ್ಬ ಆರ್.ಸಿ.ಬಿ ತಂಡದ ಅಭಿಮಾನಿಯೊಬ್ಬರು ತಮ್ಮ ಹೋಟೆಲ್ ಬಿಲ್ ಮೇಲೆ ಈ ಸಲ ಕಪ್ ನಮ್ದೇ ಎಂದು ಪ್ರಿಂಟ್ ಮಾಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರದಲ್ಲಿರುವ ಹೋಟೆಲ್ ಸದ್ಗುರು ಮಾಲೀಕ ಸಂತೋಷ್ ಆರ್‌ಸಿಬಿ ಅಭಿಮಾನಿ ಆಗಿದ್ದು, ಈ ಸಲವಾದರು ಐಪಿಎಲ್ ನಲ್ಲಿ ಆರ್‌ಸಿಬಿ ಕಪ್ ಗೆಲ್ಲಲಿ ಎಂಬ ಮಹಾದಾಸೆ ಹೊಂದಿದ್ದಾರೆ.

ಹೀಗಾಗಿ ಈ ಬಾರಿ ತನ್ನ ಹೋಟೆಲ್‍ ಬಿಲ್ ನಲ್ಲಿಯೇ ಈ ಸಲ ಕಪ್ ನಮ್ದೆ, ಆರ್‌ಸಿಬಿ ಎಂದು ಪ್ರಿಂಟ್ ಹಾಕಿಸಿದ್ದಾರೆ. ಇದನ್ನು ನೋಡಿದ ಗ್ರಾಹಕರು ಕೂಡ ಇವರ ಅಭಿಮಾನಕ್ಕೆ ಖುಷಿಯಾಗಿದ್ದಾರೆ.

ಶ್ರೀನಗರ: ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಸೇರಿ ಏಳು ಉಗ್ರರ ಸದೆಬಡಿದ ಭದ್ರತಾ ಪಡೆ