ಈ ಲಕ್ಷಣಗಳು ಕಾಣಿಸಿಕೊಂಡ್ರೆ ನಿರ್ಲಕ್ಷ ಬೇಡ.! - BC Suddi
ಈ ಲಕ್ಷಣಗಳು ಕಾಣಿಸಿಕೊಂಡ್ರೆ ನಿರ್ಲಕ್ಷ ಬೇಡ.!

ಈ ಲಕ್ಷಣಗಳು ಕಾಣಿಸಿಕೊಂಡ್ರೆ ನಿರ್ಲಕ್ಷ ಬೇಡ.!

 

ಬೆಂಗಳೂರು: ಶೀತ, ಕಫ, ಜ್ವರ, ವಾಸನೆ ಗ್ರಹಿಕೆ ಕಳೆದುಕೊಳ್ಳುವುದು, ರುಚಿ ಗ್ರಹಿಸಲು ಆಗದೇ ಇರೋದು ಇವೆಲ್ಲ ಕೊರೊನಾ ಸೋಂಕಿನ ಸಾಮಾನ್ಯ ಲಕ್ಷಣಗಳು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಎಲ್ಲೆಡೆ ಕೊರೊನಾದ ಎರಡನೆ ಅಲೆಯ ಆರ್ಭಟ ನಡೆಯುತ್ತಿದ್ದು ಇದೀಗ ಕೊರೊನಾ ಸೋಂಕಿನ ಲಕ್ಷಣಗಳೂ ಹೆಚ್ಚಾಗುತ್ತಿವೆ. ಆಹಾರ ತಜ್ಞರು 8 ಹೆಚ್ಚುವರಿ ಲಕ್ಷಣಗಳನ್ನ ಗುರುತಿಸಿದ್ದು ಈ ಲಕ್ಷಣಗಳು ಕಂಡಲ್ಲಿ ಕೂಡಲೇ ಐಸೋಲೇಟ್​ ಆಗುವಂತೆ ಸೂಚನೆ ನೀಡಿದ್ದಾರೆ.

ಅಸಾಮಾನ್ಯ ಕೆಮ್ಮು : ಕೆಮ್ಮು ಕೊರೊನಾದ ಮುಖ್ಯ ಲಕ್ಷಣಗಳಲ್ಲಿ ಒಂದು. ಆದರೆ ಈ ಕೆಮ್ಮಿನ ಶಬ್ದ ಸಾಮಾನ್ಯ ಕೆಮ್ಮಿಗಿಂತ ವಿಭಿನ್ನವಾಗಿರುತ್ತೆ. ಧೂಮಪಾನಿಯ ಕೆಮ್ಮಿಗೆ ಈ ಕೆಮ್ಮಿನ ಶಬ್ದ ಹೋಲಿಕೆ ಹೊಂದಿದೆ.

ಗುಲಾಬಿ ಬಣ್ಣದ ಕಣ್ಣು : ಚೀನಾದಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ ಕಣ್ಣು ಗುಲಾಬಿ ಬಣ್ಣಕ್ಕೆ ತಿರುಗಿದ್ರೆ ಅದು ಕೂಡ ಕೊರೊನಾದ ಲಕ್ಷಣವಂತೆ. ಕಣ್ಣು ಕೆಂಪಗಾಗೋದು, ಊದಿಕೊಳ್ಳೋದು ಹಾಗೂ ಕಣ್ಣಿನಲ್ಲಿ ನೀರು ತುಂಬಿಕೊಳ್ಳೋದು ಇದು ಕೂಡ ಕೊರೊನಾದ ಹೊಸ ಲಕ್ಷಣವಾಗಿದೆ.

ಉಸಿರಾಟದ ತೊಂದರೆ : ಎದೆಯಲ್ಲಿ ನೋವು ಉಂಟಾಗೋದ್ರ ಜೊತೆಯಲ್ಲಿ ಉಸಿರಾಡಲು ತೊಂದರೆಯಾಗುತ್ತೆ. ಅಲ್ಲದೇ ಹೃದಯ ಬಡಿತದಲ್ಲೂ ಏರಿಳಿತ ಉಂಟಾಗುತ್ತದೆ.

ಹೊಟ್ಟೆ ಆರೋಗ್ಯದಲ್ಲಿ ಏರುಪೇರು : ಸಂಶೋಧಕರು ನೀಡಿರುವ ಮಾಹಿತಿಯ ಪ್ರಕಾರ ಹೊಟ್ಟೆ ನೋವು, ಅತಿಸಾರ, ವಾಕರಿಕೆ ಇವೆಲ್ಲವೂ ಕೊರೊನಾದ ಲಕ್ಷಣಗಳಾಗಿದೆ. ಈ ಯಾವುದೇ ಸಮಸ್ಯೆಗಳು ನಿಮಗೆ ಕಂಡುಬಂದಲ್ಲಿ ಕೂಡಲೇ ಕೊರೊನಾ ಪರೀಕ್ಷೆಗೆ ಒಳಗಾಗೋದು ಒಳಿತು.

 

 

error: Content is protected !!