'ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಲ್ಲ, ಆದರೆ ಬೆಂಗಳೂರಲ್ಲಿ ಕೊರೊನಾ ಪ್ರಕರಣ ಮಿತಿಮೀರಿದೆ' - ಸಚಿವ ಸುಧಾಕರ್ - BC Suddi
‘ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಲ್ಲ, ಆದರೆ ಬೆಂಗಳೂರಲ್ಲಿ ಕೊರೊನಾ ಪ್ರಕರಣ ಮಿತಿಮೀರಿದೆ’ – ಸಚಿವ ಸುಧಾಕರ್

‘ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಲ್ಲ, ಆದರೆ ಬೆಂಗಳೂರಲ್ಲಿ ಕೊರೊನಾ ಪ್ರಕರಣ ಮಿತಿಮೀರಿದೆ’ – ಸಚಿವ ಸುಧಾಕರ್

ಬೆಂಗಳೂರು: ಕರ್ನಾಟಕದಲ್ಲಿ ರೆಮ್​ಡೆಸಿವಿರ್ ಚುಚ್ಚುಮದ್ದು ಕೊರತೆ ಇದೆ ಎಂಬ ಕೂಗು ಕೇಳಿಬಂದ ಬೆನ್ನಲ್ಲೇ ಇದೀಗ ಆಕ್ಸಿಜನ್ ಕೊರತೆ ಇದೆ ಎಂದು ಅನೇಕ ಖಾಸಗಿ ಆಸ್ಪತ್ರೆಗಳು ಹೇಳುತ್ತಿದ್ದು, ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಖಾಸಗಿ ಅವರು ಹಣ ಪಾವತಿ ಮಾಡದೇ ಇರುವುದರಿಂದ ಆಮ್ಲಜನಕ ಸಿಕ್ಕಿಲ್ಲದೇ ಹೋಗಿರಬಹುದು. ಹಾಗೆಂದು ಆಕ್ಸಿಜನ್ ಕೊರತೆ ಇದೆ ಎನ್ನೋದು ಸರಿ ಅಲ್ಲ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಾನು ಫನಾ ಸಂಘಟನೆಯವರ ಜೊತೆ ಮಾತನಾಡಿದ್ದು, ಕಡಿಮೆ ಆಕ್ಸಿಜನ್ ಇರುವ ಕಡೆ ಜಂಬೋ ಆಕ್ಸಿಜನ್ ಕೊಟ್ಟಿದ್ದೇನೆ. ಸದ್ಯಕ್ಕೆ ನಮ್ಮಲ್ಲಿ ಆಕ್ಸಿಜನ್ ಕೊರತೆ ಇಲ್ಲ. ದಯವಿಟ್ಟು ತಪ್ಪು ಮಾಹಿತಿ ಕೊಡಬೇಡಿ” ಎಂದರು.

“800 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಮಾಡುವ ಶಕ್ತಿ ನಮ್ಮಲ್ಲಿದ್ದು, ನಮಗೆ ಈಗಿನ ಪರಿಸ್ಥಿತಿಯಲ್ಲಿ ಆಕ್ಸಿಜನ್ ಅಗತ್ಯ ಇರುವುದು 200 ಮೆಟ್ರಿಕ್ ಟನ್. ಆದರೆ ನಮ್ಮ ಬಳಿ 300 ಮೆಟ್ರಿಕ್ ಟನ್ ಆಮ್ಲಜನಕ ಇದೆ. ಕೇಂದ್ರದಿಂದ ನಮಗೆ 300 ಮೆಟ್ರಿಕ್ ಟನ್ ಅಲಾಟ್ ಆಗಿದೆ. ಇನ್ನೂ ಹೆಚ್ಚು ಅಕ್ಸಿಜನ್ ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ” ಎಂದಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ನಿತ್ಯ ದಾಖಲಾಗುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಿನ್ನೆ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಹೋದ ಘಟನೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅದು ಬೆಂಗಳೂರಿನ ಸದ್ಯದ ಪರಿಸ್ಥಿತಿಯನ್ನು ಎತ್ತಿ ತೋರಿಸುವಂತಿದೆ. ಬೆಂಗಳೂರಿನಲ್ಲಿ ಬಿಗಿಕ್ರಮ ಕೈಗೊಳ್ಳದೇ ಹೋದರೆ ಕಷ್ಟ ಆಗಲಿದ್ದು, ಇದಕ್ಕೆ ಸೂಕ್ತ ಪ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಹೆಚ್ಚುತ್ತಿರುವ ಚೆಕ್ ಬೌನ್ಸ್ ಪ್ರಕರಣಗಳು: ತ್ವರಿತ ತನಿಖೆಗೆ ಸುಪ್ರೀಂ ಕೋರ್ಟ್ ನಿರ್ದೇಶನ