ಲಾಕ್‌ಡೌನ್, ನೈಟ್‌ ಕರ್ಫ್ಯೂ ಇಲ್ಲ- 3 ಪ್ರಮುಖ ಸಲಹೆ ಪಾಲನೆ ಕಡ್ಡಾಯ: ಸಿಎಂ - BC Suddi
ಲಾಕ್‌ಡೌನ್, ನೈಟ್‌ ಕರ್ಫ್ಯೂ ಇಲ್ಲ- 3 ಪ್ರಮುಖ ಸಲಹೆ ಪಾಲನೆ ಕಡ್ಡಾಯ: ಸಿಎಂ

ಲಾಕ್‌ಡೌನ್, ನೈಟ್‌ ಕರ್ಫ್ಯೂ ಇಲ್ಲ- 3 ಪ್ರಮುಖ ಸಲಹೆ ಪಾಲನೆ ಕಡ್ಡಾಯ: ಸಿಎಂ

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್, ನೈಟ್ ಕರ್ಫ್ಯೂ, ಸೀಲ್‌ಡೌನ್‌ ಹೇರುವುದಿಲ್ಲ. ಆದರೆ ಮೂರು ಪ್ರಮುಖ ಸಲಹೆ ಪಾಲನೆ ಕಡ್ಡಾಯವೆಂದು ಕೇಂದ್ರ ಸರ್ಕಾರ ತಿಳಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಇಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಿಎಂ ಯಡಿಯೂರಪ್ಪ ಸಭೆ ನಡೆಸಿದ್ದಾರೆ. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ, “ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಸಾಮಾಜಿಕ ಅಂತರ, ಇನ್‌ಡೋರ್ ಕಾರ್ಯಕ್ರಮಗಳ ಬಗ್ಗೆ ಎಚ್ಚರ ಹಾಗೂ ಸಿನಿಮಾ ಹಾಲ್‌ಗಳಲ್ಲಿ ಈಗಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕದ ಬೆಂಗಳೂರು, ಬೀದರ್ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸಲಹೆ ನೀಡಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು:
* ಮಾಸ್ಕ್ ಕಡ್ಡಾಯ ಮಾಡುವುದು, ಸಾರ್ವಜನಿಕ ಅಂತರದ ಬಗ್ಗೆ ಎಚ್ಚರಿಕೆ ವಹಿಸುವುದು. ಟೆಸ್ಟ್ ಟ್ರ್ಯಾಕ್ ಟ್ರೀಟ್ ಮಾದರಿಯಲ್ಲಿ ಪರೀಕ್ಷೆ, ಸಂಪರ್ಕ ಶೋಧ ಮತ್ತು ಚಿಕಿತ್ಸೆಯನ್ನ ತೀವ್ರಗೊಳಿಸಲು ಹೇಳಿದ್ದಾರೆ.
* ಈ ವೇಳೆ ರಾಜ್ಯದ ಕೊರೊನಾ ಸೋಂಕಿನ ಅಂಕಿ-ಅಂಶಗಳನ್ನ ಪ್ರಧಾನಿಯವರಿಗೆ ನೀಡಲಾಯ್ತು. ಕಳೆದ 10 ದಿನಗಳಲ್ಲಿ ಪಾಸಿಟಿವ್ ಸಂಖ್ಯೆ ಹೆಚ್ಚು ಗತಿಯಲ್ಲಿದೆ ಎಂಬ ಮಾಹಿತಿ ನೀಡಲಾಯ್ತು.
* ಬೆಂಗಳೂರು, ಮಹಾರಾಷ್ಟ್ರ ಕೇರಳ ಗಡಿ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ ಎಂಬುದನ್ನ ಪ್ರಧಾನಿಯವರ ಗಮನಕ್ಕೆ ತರಲಾಯ್ತು.
* ಜಾಗೃತಿ ಅಭಿಯಾನ ನಡೆಸುವುದು.. ಮದುವೆಯಂಥ ಸಮಾರಂಭಗಳಲ್ಲಿ ಹೆಚ್ಚು ಜನರು ಸೇರದಂತೆ ಎಚ್ಚರ ವಹಿಸಿ ಎಂದು ಪ್ರಧಾನಿ ಹೇಳಿದರು. ಬೆಂಗಳೂರಲ್ಲಿ 3 ಕೋವಿಡ್ ಸೆಂಟರ್​ ನಿರ್ಮಿಸಲು ಸೂಚನೆ ನೀಡಿದ್ದಾರೆ.
* ಲಸಿಕೆಯಿಂದ ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತೆ. ವಾತಾವರಣದಲ್ಲಿರುವ ವೈರಸ್ ನಾಶವಾಗಲ್ಲ.. ಹೀಗಾಗಿ ಹೆಚ್ಚು ಹೆಚ್ಚು ಎಚ್ಚರ ವಹಿಸಬೇಕೆಂದು ಪ್ರಧಾನಿ ಮೋದಿ ಹೇಳಿದ್ದಾರೆ.
* ಕೊರೊನಾ ಹೆಚ್ಚಿರುವ ಜಿಲ್ಲೆಗಳನ್ನು ಗುರುತಿಸಿ ಅಲ್ಲಿ ಟೆಸ್ಟಿಂಗ್​ಗಳನ್ನು ಹೆಚ್ಚಿಸುವಂತೆ ಮೋದಿ ಹೇಳಿದ್ದಾರೆ.
* 2,042 ಆಸ್ಪತ್ರೆಗಳ ಪೈಕಿ 1,000 ಕ್ಕೂ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ನೀಡುತ್ತಿಲ್ಲ. ಅಂಥ ಆಸ್ಪತ್ರೆಗಳ ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
* ರಾಜ್ಯದಲ್ಲಿ ಪ್ರತಿದಿನ 3 ಲಕ್ಷ ಜನರಿಗೆ ಲಸಿಕೆ ಹಾಕುವ ಮೂಲಕ ವ್ಯಾಕ್ಸಿನೇಷನ್ ಪ್ರಕ್ರಿಯೆಗೆ ಹೆಚ್ಚಿನ ವೇಗ ನೀಡಲಾಗುವುದು ಎಂದು ತಿಳಿಸಿದ್ದೇವೆ.
* ರಾಜ್ಯದಲ್ಲಿ ಶೇಕಡಾ 93 ರಷ್ಟು ಆರ್​​ಟಿಪಿಸಿಆರ್ ಟೆಸ್ಟ್ ನಡೆಸಿರುವುದಕ್ಕೆ ಕೇಂದ್ರ ಸರ್ಕಾರ ನಮ್ಮನ್ನು ಶ್ಲಾಘಿಸಿದೆ.
* ಜನರಲ್ಲಿ ಭಯ ಸೃಷ್ಟಿಸುವ ಅನಿವಾರ್ಯತೆ ಇಲ್ಲ. ವ್ಯಾಕ್ಸಿನೇಷನ್ ವೇಸ್ಟೇಜ್ ಆಗದಂತೆ ಎಚ್ಚರವಹಿಸಿ ಎಂದು ಪ್ರಧಾನಿ ಮೋದಿ ಕಿವಿಮಾತು ಹೇಳಿದರು.
* ಮೂರು ಸಲಹೆಗಳನ್ನ ಕೇಂದ್ರ ನಾಯಕರು ನೀಡಿದ್ದಾರೆ.. ಮಾಸ್ಕ್ ಕಡ್ಡಾಯ. ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳಬೇಕು. ಮತ್ತು ಒಳಾಂಗಣ ಸಭೆಗಳಲ್ಲಿ ಎಚ್ಚರ ವಹಿಸುವಂತೆ ಸಲಹೆ ನೀಡಿದ್ದಾರೆ.
* ನೋ ಕರ್ಫ್ಯೂ, ನೋ ನೈಟ್ ಕರ್ಫ್ಯೂ.. ಸಾಮಾಜಿಕ ಜೀವನ ಎಂದಿನಂತೆ ನಡೆಯಲಿದೆ. ಆದರೆ ಜನರು ಎಚ್ಚರ ವಹಿಸಬೇಕು. ಜನರು ಮಾಸ್ಕ್ ಹಾಕುವುದನ್ನೇ ಮರೆತಿದ್ದಾರೆ.
* ಕೊರೊನಾ ಮಿತಿಮೀರಿದರೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.. ಅಂಥ ಅನಿವಾರ್ಯತೆ ಸೃಷ್ಟಿಸಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ.

error: Content is protected !!