ಮಾರ್ಚ್ 20 ರಂದು ಈ ಹಳ್ಳಿಗಳಲ್ಲಿ ಕರಂಟ್ ಇಲ್ಲ.! - BC Suddi
ಮಾರ್ಚ್ 20 ರಂದು ಈ ಹಳ್ಳಿಗಳಲ್ಲಿ ಕರಂಟ್ ಇಲ್ಲ.!

ಮಾರ್ಚ್ 20 ರಂದು ಈ ಹಳ್ಳಿಗಳಲ್ಲಿ ಕರಂಟ್ ಇಲ್ಲ.!

 

ಚಿತ್ರದುರ್ಗ: 66/11ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ತುರುವನೂರಿನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಿರ್ವಹಿಸುವುದರಿಂದ  ಮಾರ್ಚ್ 20 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

66/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ತುರುವನೂರಿನಲ್ಲಿ ವಿದ್ಯುತ್ ಸರಬರಾಜು ಆಗುವ 66ಕೆವಿ ಮಾರ್ಗಗಳು ಮತ್ತು 11ಕೆವಿ ಮಾರ್ಗಗಳಾದ ಬೊಮ್ಮಕ್ಕನಹಳ್ಳಿ, ಕೂನಬೇವು, ಅವಳೇನಹಳ್ಳಿ, ದೊಡ್ಡಗಟ್ಟ ತುರುವನೂರು ಎನ್‍ಜೆವೈ, ಕರಿಯಮ್ಮನಹಟ್ಟಿ, ಕೊಟೆಹಳ್ಳಿ, ಹುಣಸೆಕಟ್ಟೆ, ಪೇಲಾರಹಟ್ಟಿ ಮತ್ತು ಎಲ್ಲಾ 11 ಕೆ.ವಿ. ಮಾರ್ಗಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಆಡಚಣೆಯಾಗಲಿದೆ.

ಗ್ರಾಹಕರು ಸಹಕರಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!