ಕೋವಿಡ್‌ಗೆ ಬಲಿಯಾದ ಆಜ್ ತಕ್ ನ ನಿರೂಪಕ..! - BC Suddi
ಕೋವಿಡ್‌ಗೆ ಬಲಿಯಾದ ಆಜ್ ತಕ್ ನ ನಿರೂಪಕ..!

ಕೋವಿಡ್‌ಗೆ ಬಲಿಯಾದ ಆಜ್ ತಕ್ ನ ನಿರೂಪಕ..!

ಹೊಸದಿಲ್ಲಿ: ಡೆಡ್ಲಿ ಸೋಂಕಿನ ಆರ್ಭಟ ಹೆಚ್ಚಿದೆ. ಸಾವಿನ ರನಕಹಳೆ ಮೊಳಗಿಸುತ್ತಿದೆ. ಸದ್ಯ ಇದೇ ಸೋಂಕಿಗೆ ಆಜ್ ತಕ್ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖ್ಯಾತ ಪತ್ರಕರ್ತ ಮತ್ತು ನಿರೂಪಕ ರೋಹಿತ್ ಸರ್ದಾನ ಮೃತಪಟ್ಟಿದ್ದಾರೆ. ಈ ಕುರಿತು ಝೀ ನ್ಯೂಸ್ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಝೀ ಮೀಡಿಯಾದಲ್ಲಿ ಹಲವು ವರ್ಷ ಕಾರ್ಯ ನಿರ್ವಹಿಸಿದ್ದ ಅವರು ದೇಶದ ಪ್ರಸಕ್ತ ಪರಿಸ್ಥಿತಿಗಳ ಕುರಿತಾದ ಚರ್ಚಾ ಕಾರ್ಯಕ್ರಮ ʼತಾಲ್ ತೋಕ್ ಕೆʼ ಯನ್ನು ನಿರೂಪಿಸುತ್ತಿದ್ದರು. ಆಜ್ ತಕ್ ನ್ಯೂಸ್ ಚಾನೆಲ್ ನಲ್ಲಿ ದಂಗಲ್ ಎಂಬ ಕಾರ್ಯಕ್ರಮದಲ್ಲಿ ಅವರು ಜನಪ್ರಿಯತೆ ಗಳಿಸಿದ್ದರು.

ಡೆಡ್ಲಿ ಸೋಂಕಿಗೆ ಸಮರ್ಪಕವಾದ ಚಿಕಿತ್ಸೆ ದೊರೆಯುತ್ತಿಲ್ಲ: ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುತ್ತಿರುವ ನಾಗರೀಕರಿಗೆ ಸಂತಾಪ ಸೂಚಿಸುತ್ತೇನೆಂದು: ರಾಹುಲ್ ಗಾಂಧಿ