ಚಾಮರಾಜನಗರ ಕೋವಿಡ್‌ ಆಸ್ಪತ್ರೆಯಲ್ಲಿ ಒಂದಾದ ಮೇಲೊಂದರಂತೆ ಮಹಾ ಯಡವಟ್ಟು : ಬದುಕಿದ್ದವರು ಸತ್ತಿದ್ದಾರೆಂದು ಮಾಹಿತಿ ನೀಡಿದರು - BC Suddi
ಚಾಮರಾಜನಗರ ಕೋವಿಡ್‌ ಆಸ್ಪತ್ರೆಯಲ್ಲಿ ಒಂದಾದ ಮೇಲೊಂದರಂತೆ ಮಹಾ ಯಡವಟ್ಟು : ಬದುಕಿದ್ದವರು ಸತ್ತಿದ್ದಾರೆಂದು ಮಾಹಿತಿ ನೀಡಿದರು

ಚಾಮರಾಜನಗರ ಕೋವಿಡ್‌ ಆಸ್ಪತ್ರೆಯಲ್ಲಿ ಒಂದಾದ ಮೇಲೊಂದರಂತೆ ಮಹಾ ಯಡವಟ್ಟು : ಬದುಕಿದ್ದವರು ಸತ್ತಿದ್ದಾರೆಂದು ಮಾಹಿತಿ ನೀಡಿದರು

ಚಾಮರಾಜನಗರ: ಜಿಲ್ಲೆಯ ಕೋವಿಡ್‌ ಆಸ್ಪತ್ರೆಯಲ್ಲಿ ಒಂದಾದ ಮೇಲೊಂದರಂತೆ ಮಹಾ ಯಡವಟ್ಟುಗಳು ನಡೆಯುತ್ತಲೇ ಇವೆ. ಸಿಬ್ಬಂದಿ ಮಾಡಿದ ಮತ್ತೊಂದು ಎಡವಟ್ಟಿನಿಂದಾಗಿ ಕುಟುಂಬವೊಂದು ಸ್ವಲ್ಪ ಸಮಯ ದುಃಖದ ಮಡುವಿನಲ್ಲಿ ಬಿದ್ದತ್ತು. ಸಂಬಂಧಿಕರಿಗೆ ಫೋನ್ ಮಾಡಿದ ಆಸ್ಪತ್ರೆ ಸಿಬ್ಬಂದಿ ಇಲ್ಲಿ ದಾಖಲಾಗಿದ್ದ ನಿಮ್ಮವರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ತೀವ್ರ ದುಃಖಿತರಾದ ಸಮೀಪದ ಲಿಂಗಣಾಪುರದ ಸಂಬಂಧಿಕರು ಅವರ ತಾಯಿ ಅವರು ಸಾವಿಗೀಡಾಗಿದ್ದಾರೆಂದು ಊರಿನಲ್ಲಿ ಅಂತ್ಯಕ್ರಿಯೆಗೆ ಬೇಕಾದ ಏರ್ಪಾಟು ಮಾಡಿ ಆಸ್ಪತ್ರೆಯತ್ತ ಧಾವಿಸಿದ್ದಾರೆ. ಆಗ ಸಿಬ್ಬಂದಿ ಯಾರದ್ದೋ ಮೃತ ಶರೀರ ತೋರಿಸಿ, ನೋಡಿ ನಿಮ್ಮವರು ಎಂದು ಸಿಬ್ಬಂದಿ ಹೇಳಿದ್ದಾರೆ. ಆದರೆ, ಶವ ಅವರ ತಾಯಿಯದ್ದಾಗಿರಲಿಲ್ಲ.

ಕೂಡಲೇ ಅವರು ಆಸ್ಪತ್ರೆಯ ವಾರ್ಡ್‌ಗೆ ತೆರಳಿ ನೋಡಿದಾಗ, ಅವರ ತಾಯಿ ಬೆಡ್‌ನಲ್ಲೇ ಮಲಗಿದ್ದರು. ತಾಯಿಯನ್ನು ಕಂಡ ಪುತ್ರನ ಕಂಗಳಲ್ಲಿಆನಂದಭಾಷ್ಪ ಸುರಿದವು. ನಂತರ ತಿಳಿದ ವಿಚಾರವೆನೆಂದರೆ, ಯಾರಿಗೋ ದೂರವಾಣಿ ಕರೆ ಮಾಡಲು ಹೋಗಿ ಸಿಬ್ಬಂದಿ ಇವರಿಗೆ ಮಾಡಿದ್ದರು. ಈ ಎಡವಟ್ಟು ಒಂದಷ್ಟು ಕಾಲ ಒಂದು ಇಡೀ ಕುಟುಂಬವನ್ನು ದುಃಖದ ಮಡುವಿನಲ್ಲಿ ಮುಳುಗುವಂತೆ ಮಾಡಿತ್ತು.