ರಾಜ್ಯ ಸರ್ಕಾರವು ಗೋಹತ್ಯೆ ನಿಷೇಧ : ರಾಜ್ಯದಲ್ಲಿ 60 ದಿನಗಳಲ್ಲಿ 58 ಪ್ರಕರಣಗಳು ದಾಖಲು - BC Suddi
ರಾಜ್ಯ ಸರ್ಕಾರವು ಗೋಹತ್ಯೆ ನಿಷೇಧ : ರಾಜ್ಯದಲ್ಲಿ 60 ದಿನಗಳಲ್ಲಿ 58 ಪ್ರಕರಣಗಳು ದಾಖಲು

ರಾಜ್ಯ ಸರ್ಕಾರವು ಗೋಹತ್ಯೆ ನಿಷೇಧ : ರಾಜ್ಯದಲ್ಲಿ 60 ದಿನಗಳಲ್ಲಿ 58 ಪ್ರಕರಣಗಳು ದಾಖಲು

ಬೆಂಗಳೂರು : ರಾಜ್ಯ ಸರ್ಕಾರವು ಗೋಹತ್ಯೆ ನಿಷೇಧ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆಯನ್ನು ಫೆಬ್ರವರಿ 15 ರಂದು ಜಾರಿಗೆ ತಂದಿದ್ದು, ಈ ವಿವಾದಿತ ಕಾಯ್ದೆಯಡಿಯಲ್ಲಿ ರಾಜ್ಯದಾದ್ಯಂತ ಕಳೆದ 60 ದಿನಗಳಲ್ಲಿ, ಗೋ ಮಾಂಸಕ್ಕಾಗಿ ದನಗಳ ಹತ್ಯೆ ಮಾಡಿದ ಹಾಗೂ ಅಕ್ರಮ ಗೋ ಸಾಗಾಟ ಮಾಡಿದ ಆರೋಪದಲ್ಲಿ 58 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ಸರ್ಕಾರದ ಮೂಲಗಳ ಪ್ರಕಾರ, ಅಕ್ರಮ ವಧೆ ಮಾಡುವ ಸಂದರ್ಭ 200 ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಲಾಗಿದೆ. ಗೋಮಾಂಸಕ್ಕಾಗಿ ಅಕ್ರಮ ಗೋ ಸಾಗಾಟ ಹಾಗೂ ಅಕ್ರಮ ವಧೆ ತಡೆಯಲು ಸಂಬಂಧಪಟ್ಟವರು ಪತ್ತೆ ಹಚ್ಚಿ ಬಂಧಿಸುವ ಅಧಿಕಾರವನ್ನು ಈ ಕಾಯ್ದೆಯಡಿ ನೀಡಲಾಗಿದೆ.

ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದ ಪ್ರಮಾಣಪತ್ರ ಅಥವಾ ಪಶುವೈದ್ಯಕೀಯ ಅಧಿಕಾರಿಗಳ ಪ್ರಮಾಣಪತ್ರಗಳಿಲ್ಲದೆ ದನಗಳನ್ನು ಸಾಗಿಸಲಾಗುತ್ತಿದ್ದರೆ, ಅಧಿಕಾರಿಗಳಿಗೆ ದಾಳಿ ನಡೆಸಲು ಮತ್ತು ಗೋವುಗಳನ್ನು ವಶಕ್ಕೆ ತೆಗೆದುಕೊಳ್ಳುವ ಅಧಿಕಾರವಿದೆ.

ಈ ಕಾಯ್ದೆಯಡಿ ಆರೋಪಿಗಳಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯೊಂದಿಗೆ 50,000 ರೂ.ಗಳಿಗಿಂತ ಅಧಿಕ ದಂಡ ವಿಧಿಸಬಹುದಾಗಿದೆ.

ಸುಳ್ಳುಗಳು ನಿಮ್ಮ ಪೇಟೆಂಟ್ ಅಲ್ಲವೇ ಬಿಜೆಪಿಗರೇ : ಕಾಂಗ್ರೆಸ್‌ ವ್ಯಂಗ್ಯ