ರಾಜ್ಯದಲ್ಲಿ ಶನಿವಾರ ಹಾಗೂ ರವಿವಾರ ಸಂಪೂರ್ಣ ಬಂದ್-ಉಳಿದ ದಿನ ನೈಟ್ ಕರ್ಫ್ಯೂ ಜಾರಿ - BC Suddi
ರಾಜ್ಯದಲ್ಲಿ ಶನಿವಾರ ಹಾಗೂ ರವಿವಾರ ಸಂಪೂರ್ಣ ಬಂದ್-ಉಳಿದ ದಿನ ನೈಟ್ ಕರ್ಫ್ಯೂ ಜಾರಿ

ರಾಜ್ಯದಲ್ಲಿ ಶನಿವಾರ ಹಾಗೂ ರವಿವಾರ ಸಂಪೂರ್ಣ ಬಂದ್-ಉಳಿದ ದಿನ ನೈಟ್ ಕರ್ಫ್ಯೂ ಜಾರಿ

ಬೆಂಗಳೂರು:ರಾಜ್ಯದಲ್ಲಿ ಶನಿವಾರ ಹಾಗೂ ರವಿವಾರ ಸಂಪೂರ್ಣ ಕರ್ಫ್ಯೂ ವಿಧಿಸಿದ ಸರಕಾರ ಆದೇಶ ನೀಡಿದೆ. ಉಳಿದಂತೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಆದೇಶ ನೀಡಲಾಗಿದೆ.

ಏಪ್ರಿಲ್ 21ರಿಂದ ಹೊಸ ಮಾರ್ಗಸೂಚಿ ಜಾರಿಗೊಳಿಸಿ ಸರಕಾರದ ಮುಖ್ಯ ಕಾರ್ಯದರ್ಶಿಗಳಿ ಆದೇಶ ಹೊರಡಿಸಿದ್ದಾರೆ. ಮುಂದಿನ ಮೇ ತಿಂಗಳ 4ರ ತನಕ ಹೊಸ ಮಾರ್ಗಸೂಚಿ ಜಾರಿಯಲ್ಲಿರಲಿದೆ. ಇನ್ನು ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.

ಉಳಿದಂತೆ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯ ತನಕ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಈ ಸಂದರ್ಭದಲ್ಲಿ ಬೆಳಿಗ್ಗೆ 11 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.

ಧಾರ್ಮಿಕ ಕೇಂದ್ರಗಳು ಸಂಪೂರ್ಣ ಬಂದ್:
ಇನ್ನು ಧಾರ್ಮಿಕ ಕೇಂದ್ರಗಳನ್ನು ಸಂಪೂರ್ಣ ಬಂದ್ ಮಾಡಿ ಆದೇಶ ನೀಡಲಾಗಿದೆ. ಕೇವಲ ಪೂಜಾರಿಗಷ್ಟೇ ದೇವಾಲಯಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಮದೆವೆ ಸಮಾರಂಭಗಳಿಗೆ 50 ಜನರ ಮಿತಿ:
ಮದುವೆ ಸಮಾರಂಭಗಳಿಗೆ 50 ಜನರ ಮಿತಿ ವಿಧಿಸಿದೆ. ಉಳಿದಂತೆ ಇತರ ಸಮಾರಂಭಗಳು ಹಾಗೂ ಅಂತ್ಯ ಸಂಸ್ಕಾರಗಳಿಗೆ 25 ಜನರ ಮಿತಿ ವಿಧಿಸಿದೆ.

ಶಾಲಾ ಕಾಲೇಜುಗಳು ಬಂದ್:
ಮುಂದಿನ ಏಳು ದಿನಗಳ ಕಾಲ ಶಾಲಾ ಕಾಲೇಜುಗಳನ್ನು ಸಂಪೂರ್ಣ ಬಂದ್ ಮಾಡಿ ಆದೇಶ ನೀಡಲಾಗಿದೆ.