ಅಪ್ರಾಪ್ತ ಬಾಲಕಿಯ ಅತ್ಯಾಚಾರ : ಟಿಕ್‌ಟಾಕ್ ತಾರೆ ’ಫನ್‌ ಬಕೆಟ್ ಭಾರ್ಗವ್ ’ ಬಂಧನ - BC Suddi
ಅಪ್ರಾಪ್ತ ಬಾಲಕಿಯ ಅತ್ಯಾಚಾರ : ಟಿಕ್‌ಟಾಕ್ ತಾರೆ ’ಫನ್‌ ಬಕೆಟ್ ಭಾರ್ಗವ್ ’ ಬಂಧನ

ಅಪ್ರಾಪ್ತ ಬಾಲಕಿಯ ಅತ್ಯಾಚಾರ : ಟಿಕ್‌ಟಾಕ್ ತಾರೆ ’ಫನ್‌ ಬಕೆಟ್ ಭಾರ್ಗವ್ ’ ಬಂಧನ

ವಿಶಾಖಪಟ್ಟಣಂ: ಓ ಮೈ ಗಾಡ್! ಡೈಲಾಗ್ ಖ್ಯಾತಿಯ ಟಿಕ್ ಟಾಕ್ ಸ್ಟ್ರಾರ್ ಚಿಪ್ಪಡಾ ಭಾರ್ಗವ್ ಅಲಿಯಾಸ್ ಫನ್‌ ಬಕೆಟ್ ಭಾರ್ಗವ್ ನನ್ನು ವಿಶಾಖಪಟ್ಟಣಂನಲ್ಲಿ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆಂಧ್ರ ಪೊಲೀಸರು ಪೋಕ್ಸೋ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ.

ಸಂತ್ರಸ್ತೆಯ ಕುಟುಂಬ ಸದಸ್ಯರು ಏಪ್ರಿಲ್ 16ರಂದು ವಿಶಾಖಪಟ್ಟಣಂ ಕಮಿಷನರೇಟ್ ಅಡಿಯಲ್ಲಿ ಪೆಂಡುರ್ತಿ ಪೊಲೀಸ್ ಠಾಣೆಗೆ ದೂರು ನೀಡಿದಾಗ ಲೈಂಗಿಕ ದೌರ್ಜನ್ಯ ಬೆಳಕಿಗೆ ಬಂದಿದೆ. ಸಂತ್ರಸ್ತೆ ನಾಲ್ಕು ತಿಂಗಳ ಗರ್ಭಿಣಿ ಎಂದು ಕುಟುಂಬಕ್ಕೆ ತಿಳಿದ ನಂತರ ದೂರು ದಾಖಲಿಸಲಾಗಿದೆ. ನಂತರ ಆರೋಪಿಯನ್ನು ಆಂಧ್ರ ಪೊಲೀಸರು ಹೈದರಾಬಾದ್ ನ ಕೊಂಪಲ್ಲಿಯಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿ ಭಾರ್ಗವ್ ಸಂತ್ರಸ್ತೆಯನ್ನು ಕೆಲವು ಟಿಕ್ ಟಾಕ್ ವೀಡಿಯೊಗಳಲ್ಲಿ ನೋಡಿ ಆಕೆಯನ್ನು ಸಂಪರ್ಕಿಸಿ ಮಾಧ್ಯಮ ಚಾನೆಲ್ ಗಳಲ್ಲಿ ಆಫರ್ ಕೊಡಿಸುವುದಾಗಿ ಭರವಸೆ ನೀಡಿ ಬಳಿಕ ಆಕೆಗೆ ಪ್ರಪೋಸ್ ಮಾಡಿದ್ದಾನೆ. ಆದರೆ ಅದನ್ನು ಆಕೆ ತಿರಸ್ಕರಿಸಿದ್ದಳು. ಇದಾದ ಬಳಿಕ ಆಕೆಯ ವಿಡಿಯೋಗಳನ್ನು ತೋರಿಸಿ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಮಾಡಿದ್ದನು ಎಂದು ತಿಳಿದುಬಂದಿದೆ.

ಈ ಕುರಿತು ಮಾಹಿತಿ ನೀಡಿದ ಸಹಾಯಕ ಪೊಲೀಸ್ ಆಯುಕ್ತ ಪ್ರೇಮ್ ಕಾಜಲ್, ಸಂತ್ರಸ್ತೆ ಗರ್ಭಿಣಿಯಾಗಿದ್ದು, ಪೋಕ್ಸೊ ಕಾಯ್ದೆಯನ್ನು ಹೊರತುಪಡಿಸಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಲೈಂಗಿಕ ದೌರ್ಜನ್ಯಕ್ಕಾಗಿ ಶಿಕ್ಷೆ), 354 (ಮಹಿಳೆಗೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಅಡಿಯಲ್ಲಿ ಭಾರ್ಗವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಆರೋಪಿಯನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಮೇ 3 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿರುವ ಬನ್ ಬಕೆಟ್ ಖ್ಯಾತಿಯ ನಿತ್ಯಾ ನಾನು ಕಳೆದ 12 ತಿಂಗಳುಗಳಿಂದ ಭಾರ್ಗವ್ ಅವರೊಂದಿಗೆ ಸಂಪರ್ಕದಲ್ಲಿರಲಿಲ್ಲ , ಸಾಮಾಜಿಕ ಮಾಧ್ಯಮಗಳ ಮೂಲಕ ಭಾರ್ಗವ್ ಬಂಧನದ ವಿಚಾರ ತಿಳಿದುಬಂದಿದೆ. ಇನ್ನು ಕೆಲವು ಸಾಮಾಜಿಕ ಮಾಧ್ಯಮಗಳು ಭಾರ್ಗವ್‌ನಿಂದ ಅತ್ಯಾಚಾರಕ್ಕೊಳಗಾದಂತೆ ಬಿಂಬಿಸಲು ಬಳಸುತ್ತಿರುವ ತನ್ನ ಫೋಟೋಗಳನ್ನು ಅಳಿಸುವಂತೆ ನಿತ್ಯ ಅವರು ಮನವಿ ಮಾಡಿಕೊಂಡಿದ್ದಾರೆ.

ಚೆನ್ನೈ: ಮತ್ತೊಮ್ಮೆ ಮುಗ್ಗರಿಸಿದ ಮುಂಬೈ : 6 ವಿಕೆಟ್ ಗಳ ಗೆಲುವು ದಾಖಲಿಸಿದ ಡೆಲ್ಲಿ